ಕೆಎಸ್ಸಾರ್ಟಿಸಿಗೆ ಸಾರ್ವಜನಿಕ ಸಾರಿಗೆ ಪ್ರಶಸ್ತಿ ಪ್ರದಾನ

Update: 2020-01-31 16:13 GMT

ಬೆಂಗಳೂರು, ಜ.31: ಸಾಮಾಜಿಕ ಕಳಕಳಿ ವರ್ಗದಡಿ ಸ್ವಚ್ಛತೆಯೇ ಸೇವೆ ಉಪಕ್ರಮಕ್ಕೆ ಕೆಎಸ್ಸಾರ್ಟಿಸಿಗೆ ರಾಷ್ಟ್ರೀಯ ಸಾರ್ವಜನಿಕ ಸಾರಿಗೆ ಪ್ರಶಸ್ತಿ-2019ರನ್ನು ನೀಡಲಾಗಿದೆ.

ಹೊಸದಿಲ್ಲಿಯ ಮಾಣಿಕ್ ಷಾ ಸೆಂಟರ್‌ನಲ್ಲಿ ನಡೆದ ಎಎಸ್‌ಆರ್‌ಟಿಯುನ ಅಂತರ್‌ರಾಷ್ಟ್ರೀಯ ಸಮ್ಮೇಳನದಲ್ಲಿ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ ರಾಜ್ಯಖಾತೆ ಸಚಿವ ಜನರಲ್ ಜಯ್ ಕುಮಾರ್ ಸಿಂಗ್ ಅವರು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಉತ್ತರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ರಾಜಶೇಖರ್, ಎಎಸ್‌ಆರ್‌ಟಿಯುನ ಕಾರ್ಯನಿರ್ವಾಹಕ ನಿರ್ದೇಶಕ ಕ್ಯಾಪ್ಟನ್ ವಿ.ವಿ.ರತ್ನಪಾರ್ಕಿ ಸೇರಿದಂತೆ ಮತ್ತಿತರಿದ್ದರು.

ಕೆಎಸ್ಸಾರ್ಟಿಸಿ ಕೈಗೊಂಡ ಸ್ವಚ್ಛತೆಯ ಕ್ರಮಗಳು: ಏಕ ಬಳಕೆಯ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ನಿಷೇಧಿಸಲಾಗಿದ್ದು, ಇದರಿಂದಾಗಿ ಪ್ರತಿವರ್ಷ ಸುಮಾರು 1.20 ಕೋಟಿ ನೀರಿನ ಬಾಟಲ್‌ಗಳ ತ್ಯಾಜ್ಯ ಭೂಮಿಗೆ ಹೋಗುವುದನ್ನು ತಪ್ಪಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನು ಪುಡಿ ಮಾಡುವ ಯಂತ್ರವನ್ನು ಅಳವಡಿಸಲಾಗಿದೆ.

ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸುವ ಯಂತ್ರಗಳನ್ನು ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಬೆಂಗಳೂರು, ಶಿವಮೊಗ್ಗ, ಮಂಗಳೂರು, ಹಾಸನ, ಮೈಸೂರು, ದಾವಣಗೆರೆ, ಚಿತ್ರದುರ್ಗ ಬಸ್ ನಿಲ್ದಾಣ ಮತ್ತು ಘಟಕ 6, ಬೆಂಗಳೂರು ಕೇಂದ್ರಿಯ ಭಾಗದಲ್ಲಿ ಅಳವಡಿಸಲಾಗಿದೆ. ನಿಮ್ಮ ನೀರಿನ ಬಾಟಲ್‌ನೊಂದಿಗೆ ನಿಮ್ಮ ಸೆಲ್ಫಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಬಸ್ ನಿಲ್ದಾಣದಲ್ಲಿ ಶ್ರಮದಾನ ಕಾರ್ಯಕ್ರಮ ಹಾಗೂ ಸಾರಿಗೆ ಪರಿಸರ ಪ್ರಶಸ್ತಿ ಸ್ಥಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News