ಬಜೆಟ್‌ನಲ್ಲಿ ಗಂಭೀರ ಸಮಸ್ಯೆಗಳಿಗೆ ಪರಿಹಾರವೇ ಇಲ್ಲ: ಈಶ್ವರ್ ಖಂಡ್ರೆ

Update: 2020-02-01 17:51 GMT

ಬೆಂಗಳೂರು, ಫೆ.1: ಪ್ರಸ್ತುತ ಸಾಲಿನ ಕೇಂದ್ರ ಸರಕಾರದ ಬಜೆಟ್ ನಿರಾಶಾದಾಯಕವಾಗಿದ್ದು, ಗಂಭೀರ ಸಮಸ್ಯೆಗಳಿಗೆ ಪರಿಹಾರವೇ ಇಲ್ಲದಂತೆ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಪಾದಿಸಿದರು.

ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಜ್ವಲಂತ ಸಮಸ್ಯೆಗಳಾದ ಜಿಡಿಪಿ ಕುಸಿತ, ಆರ್ಥಿಕ ಕುಸಿತ, ನಿರುದ್ಯೋಗ ಈ ಸಮಸ್ಯೆಗಳ ಪರಿಹಾರಕ್ಕೆ ಯೋಜನೆ ಘೋಷಿಸಿಲ್ಲ. ರೈತರಿಗೆ ಮಾರುಕಟ್ಟೆಯಲ್ಲಿ ಖಚಿತ ಬೆಲೆ ನೀಡಲಿಲ್ಲ. ರೈತರ ಆದಾಯ ಹೆಚ್ಚಿಸುವ ಯೋಜನೆಯೂ ಅವರ ಬಳಿ ಇಲ್ಲ ಎಂದು ಟೀಕಿಸಿದರು.

ಕಳೆದ ಇಪ್ಪತ್ತು ವರ್ಷಗಳಲ್ಲಿ ಜಿಡಿಪಿ ಭಾರೀ ಕೆಳಮಟ್ಟಕ್ಕೆ ಕುಸಿದಿದೆ. ವಿತ್ತೀಯ ಕೊರತೆ 3.8 ಆಗಿದೆ. ನಿಜವಾಗಿಯೂ ವಿತ್ತೀಯ ಕೊರತೆ ಜಿಡಿಪಿಗಿಂತಲೂ ಹೆಚ್ಚಿದೆ. 500 ಪಾಯಿಂಟ್ ಸೆನ್ಸೆಕ್ಸ್ ಕುಸಿದಿದೆ. ಇವೆಲ್ಲವನ್ನು ಗಮನಿಸಿದರೆ ಇದು ನಿರಾಶಾದಾಯಕ ಬಜೆಟ್ ಆಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News