ಓ ಮೆಣಸೇ...

Update: 2020-02-02 18:10 GMT

ಭಾರತ ಪ್ರಜಾಪ್ರಭುತ್ವದ ದೇಗುಲ - ನಳಿನ್ ಕುಮಾರ್ ಕಟೀಲು, ಸಂಸದ.
ಆ ದೇಗುಲವನ್ನು ಧ್ವಂಸಗೊಳಿಸಿ ರಾಮಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ.

---------------------

ಸಾಲ ತಂದಾದರೂ ಸರಕಾರ ರೈತರ ನೆರವಿಗೆ ಬರಲಿದೆ - ಯಡಿಯೂರಪ್ಪ, ಮುಖ್ಯಮಂತ್ರಿ.
ಸಾಲಪೀಡಿತ ರೈತರ ನೆರವು ಸಾಲಪೀಡಿತ ಸರಕಾರದಿಂದ ಸಾಧ್ಯವೇ?
---------------------

ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರಕಾರಗಳು ರೈತರಿಗೆ ಶಾಪವಾಗಿ ಪರಿಣಮಿಸಿದೆ - ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.
ರೈತರ ಶಾಪವೇ ಆ ಸರಕಾರಗಳನ್ನು ಉರುಳಿಸಲಿದೆ.

---------------------

ಪಕ್ಷಕ್ಕೆ ಒಳಿತಾಗುವುದಾದರೆ ಸಚಿವ ಸ್ಥಾನವೇನು, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ - ಮಾಧು ಸ್ವಾಮಿ, ಸಚಿವ.
ರಾಜ್ಯಕ್ಕೆ ಲಾಭವಾಗುವ ಸಾಧ್ಯತೆಗಳಂತೂ ಇವೆ.

---------------------

ಬಿಜೆಪಿಯ ಸಹವಾಸ ಮಾಡಿದವರು ಯಾರೂ ಅತಂತ್ರರಾಗಿಲ್ಲ - ಆರ್.ಅಶೋಕ್, ಸಚಿವ.
ಬಿಜೆಪಿ ಸಹವಾಸ ಮಾಡಿದ ಮತದಾರರ ಹೊರತು.

---------------------

ಮೇಲ್ಮನೆಯದ್ದು ಪ್ರೂಫ್ ರೀಡರ್ ಕೆಲಸ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ.
ಕೆಳಮನೆಯದ್ದು ಪ್ರೂಫ್ ಮಿಸ್ಟೇಕ್ ಮಾಡುವ ಕೆಲಸವೇ?

---------------------

ಭಯೋತ್ಪಾದಕರು ನಮ್ಮವರು ಎಂದು ಹೇಳಿಕೊಳ್ಳುವ ಹೀನ ಸಂಸ್ಕೃತಿಗೆ ಸೇರಿದವನು ನಾನಲ್ಲ - ಸಿ.ಟಿ. ರವಿ, ಸಚಿವ.
ನಾನೇ ಭಯೋತ್ಪಾದಕ ಎಂದು ಹೇಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.

---------------------

ನಾನು ಮಾಜಿ ಮುಖ್ಯಮಂತ್ರಿ, ಈಗ ಕೇವಲ ಮಂತ್ರಿ - ಜಗದೀಶ್ ಶೆಟ್ಟರ್, ಸಚಿವ.
ಮುಂದಿನ ದಿನಗಳಲ್ಲಿ ಮಾಜಿ ಮಂತ್ರಿ, ಹಾಲಿ ಕುತಂತ್ರಿಯಾಗುವ ಸಾಧ್ಯತೆಗಳಿವೆ.

---------------------

ಸರಕಾರಿ ಆಸ್ಪತ್ರೆಗಳಲ್ಲಿ 24 ತಾಸು ನಿರಂತರ ಕ್ಯಾಂಟೀನ್ ಸೇವೆ ಒದಗಿಸಲಾಗುವುದು - ಶ್ರೀರಾಮುಲು, ಸಚಿವ.
  ವೈದ್ಯಕೀಯ ಸೇವೆಯ ಗತಿಯೇನು?

---------------------

ಸಮಾಜದಲ್ಲಿ ದುಷ್ಟ ಶಕ್ತಿಗಳು ತಲೆಎತ್ತದಂತೆ ನೋಡಿಕೊಳ್ಳಬೇಕು - ಕೋಟ ಶ್ರೀನಿವಾಸ ಪೂಜಾರಿ, ಸಚಿವ.
ಸರಕಾರದಲ್ಲಿರುವ ಸಚಿವರು ತಲೆ ತಗ್ಗಿಸಿ ಕೂತರೂ ಸಾಕು.

---------------------

ವಿರೋಧ ಪಕ್ಷಗಳು ರಾಷ್ಟ್ರಧರ್ಮ ಪಾಲಿಸಬೇಕು - ರಾಜನಾಥ್ ಸಿಂಗ್, ಕೇಂದ್ರ ಸಚಿವ.
ಆಡಳಿತ ಪಕ್ಷಕ್ಕೆ ಆ ಹೊಣೆಗಾರಿಕೆಯಿಲ್ಲ ಎಂದು ಕಾಣುತ್ತದೆ.

---------------------

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಯ್ದಿಗಲೆಲ್ಲಾ ನಮಗೆ ಒಳ್ಳೆಯದೇ ಆಗಿದೆ - ಬಿ.ಸಿ.ಪಾಟೀಲ್, ಶಾಸಕ.
ಅಂದರೆ ಬೈಗುಳವೇ ನಿಮಗೆ ಆಶೀರ್ವಾದವಿರಬೇಕು.

---------------------

ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸಲು ಸಿಎಎಯನ್ನು ಜಾರಿಗೆ ತರಲಾಗುತ್ತಿದೆ - ನರೇಂದ್ರ ಮೋದಿ ಪ್ರಧಾನಿ.
ಚಾರಿತ್ರಿಕವಾದ ಇನ್ನೊಂದು ಅನ್ಯಾಯವನ್ನು ಮಾಡುವ ಮೂಲಕವೆ?

---------------------

ನನಗೆ ಗೂಟದ ಕಾರಿನ ಅಗತ್ಯ ಇಲ್ಲ, ಎತ್ತಿನ ಗಾಡಿಯಲ್ಲೂ ನಾನು ಓಡಾಡುತ್ತೇನೆ - ರೇಣುಕಾಚಾರ್ಯ, ಶಾಸಕ.
ಎತ್ತಿನ ಗಾಡಿಯಲ್ಲಿ ತುಸು ಎಚ್ಚರಿಕೆಯಿರಲಿ. ನಿಮ್ಮನ್ನು ಕಂಡರೆ ಅದು ಗುಮ್ಮೀತು.

---------------------

ಮಹಾತ್ಮಾ ಗಾಂಧಿಯ ಮಾತನ್ನು ಈಗ ಆರೆಸ್ಸೆಸ್ ಮಾತ್ರ ಪಾಲಿಸುತ್ತಿದೆ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ.
ಅವರ ಕ್ವಿಟ್ ಇಂಡಿಯಾ ಕರೆಯನ್ನು ಪಾಲಿಸಬಾರದೇ?

---------------------

ಕೆಪಿಸಿಸಿ ಹುದ್ದೆ ಹಾದಿ ಬೀದಿಗಳಲ್ಲಿ ತೀರ್ಮಾನ ಮಾಡುವುದಲ್ಲ - ಡಿ.ಕೆ.ಶಿವಕುಮಾರ್, ಶಾಸಕ.
 ಹಾದಿ ಬೀದಿಗಳಲ್ಲಿರುವವರು ತೀರ್ಮಾನ ಮಾಡುವುದಾಗಿರಬಹುದೇ?

---------------------
ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಕಾಯ್ದೆಯಿಂದ ಯಾವುದೇ ಸಮುದಾಯದವರಿಗೆ ತೊಂದರೆಯಾದರೆ ನಾನೇ ಹೋರಾಟ ನಡೆಸುತ್ತೇನೆ - ಬಾಬಾ ರಾಮ್‌ದೇವ್, ಯೋಗಗುರು.
ನಿಮ್ಮ ಪತಂಜಲಿ ಔಷಧಿಗಳಿಂದ ತೊಂದರೆಯಾದವರ ಪರವಾಗಿ ಹೋರಾಟ ನಡೆಸುವವರು ಬೇಕಾಗಿದ್ದಾರೆ.

---------------------

ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗಳು ವೌಲ್ಯ ಕಳೆದುಕೊಳ್ಳುತ್ತಿವೆ - ಬನ್ನಂಜೆ ಗೋವಿಂದಾ ಚಾರ್ಯ, ವಿದ್ವಾಂಸ.
ತಮಗೆ ಸಿಕ್ಕಿಲ್ಲವೆಂಬ ಖೇದವೇ?
---------------------

ಪ್ರಧಾನಿ ಮೋದಿ ಶ್ರೀರಾಮ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಹನುಮಂತನಿದ್ದಂತೆ - ಶಿವರಾಜ್ ಸಿಂಗ್ ಚೌಹಾಣ್, ಮ.ಪ್ರ. ಮಾಜಿ ಮುಖ್ಯಮಂತ್ರಿ.
ಒಬ್ಬ ಹೆಂಡತಿಯನ್ನು ತೊರೆದ. ಇನ್ನೊಬ್ಬ ಬಾಲಕ್ಕೆ ಬೆಂಕಿ ಹಚ್ಚಿ ದೇಶ ಸುಟ್ಟ.

---------------------

ತನ್ನ ತಪ್ಪನ್ನು ಅರಿತು ಮತ್ತೆ ಬಿಜೆಪಿ ಜೊತೆ ಮೈತ್ರಿ ಸರಕಾರ ರಚಿಸಲು ಶಿವಸೇನೆ ಬಯಸಿದರೆ ಬಿಜೆಪಿ ಸಿದ್ಧವಿದೆ- ಸುಧೀರ್ ಮುಂಗತಿವರ್, ಬಿಜೆಪಿ ಮುಖಂಡ.
ನೀವು ನಿಮ್ಮ ತಪ್ಪನ್ನು ತಿದ್ದಿ ಮುಖ್ಯಮಂತ್ರಿ ಹುದ್ದೆ ಶಿವಸೇನೆಗೆ ನೀಡಲು ಸಿದ್ಧರಿದ್ದೀರಾದರೆ ಅವರೂ ಸಿದ್ಧವಂತೆ.

---------------------

ತನಗೆ ಗೋಡ್ಸೆ ಸಿದ್ಧಾಂತದಲ್ಲಿ ನಂಬಿಕೆ ಇದೆ ಎಂದು ಹೇಳುವ ಧೈರ್ಯ ಪ್ರಧಾನಿ ಮೋದಿಗೆ ಇಲ್ಲ - ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ.
ಹೇಳದಿದ್ದರೆ ಏನಾಯಿತು, ಅದನ್ನು ಅನುಷ್ಠಾನಕ್ಕೆ ತರುತ್ತಿದ್ದಾರಲ್ಲ?

---------------------

ಸಮಾಜದಲ್ಲಿ ಈಗ ಧರ್ಮದ ಹೆಸರಿನಲ್ಲಿ ಅಧರ್ಮ ತಾಂಡವವಾಡುತ್ತಿದೆ - ಬಸವರಾಜ ಬೊಮ್ಮಾಯಿ, ಸಚಿವ.
ಅಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎನ್ನುವುದು ಬಿಜೆಪಿ ರಾಜಕಾರಣದ ತಿರುಳಂತೆ.

---------------------

ನನ್ನ ಬರವಣಿಗೆಯ ಕಾಲ ಅಂತ್ಯವಾಗುತ್ತಿದೆ - ಎಸ್.ಎಲ್. ಭೈರಪ್ಪ, ಸಾಹಿತಿ.
ಅದು ಯಾವತ್ತೋ ಅಂತ್ಯವಾಗಿತ್ತು. ನಿಮಗೆ ಈಗ ಮನವರಿಕೆಯಾಗುತ್ತಿದೆ.

---------------------

ಕರ್ನಾಟಕದಲ್ಲಿ ಮೂರು ಲಕ್ಷಕ್ಕೂ ಅಧಿಕ ಬಾಂಗ್ಲಾ ವಲಸಿಗರಿದ್ದಾರೆ - ಭಾಸ್ಕರ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ.
ಎನ್‌ಆರ್‌ಸಿ ಮಾಡಿದರೆ ನೀವು ಡಿಟೆನ್‌ಶನ್ ಸೆಂಟರ್ ಸೇರುವ ಸಾಧ್ಯತೆಗಳಿವೆ, ಎಚ್ಚರಿಕೆ.

---------------------

ಯಾರೇ ಆಗಲಿ ಜೈಲಿಗೆ ಹೋಗದೆ ರಾಜಕೀಯ ನಾಯಕನಾಗಲು ಸಾಧ್ಯವಿಲ್ಲ - ದಿಲೀಪ್ ಘೋಷ್, ಪ.ಬಂ. ಬಿಜೆಪಿ ಅಧ್ಯಕ್ಷ.
ಕೆಲವೊಮ್ಮೆ ಕೆಲವು ನಾಯಕರನ್ನು ಜೈಲಿಗೆ ಹಾಕದೇ ದೇಶದ ಉದ್ಧಾರವೂ ಸಾಧ್ಯವಿಲ್ಲ.

---------------------

ನಂಬಿಕೆಯ ಪಕ್ಕದಲ್ಲಿ ನೆಮ್ಮದಿ ಇರುತ್ತದೆ - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ.
ನಂಬಿಕೆ ಕೆಟ್ಟವರು ಕೆಲವರಿದ್ದಾರೆ.
--------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...