×
Ad

ಮಂಡ್ಯ ವಿವಿ ಅಡಿಯಲ್ಲೇ ಪರೀಕ್ಷೆ ನಡೆಸುವ ಭರವಸೆ: ಪ್ರತಿಭಟನೆ ಹಿಂಪಡೆದ ವಿದ್ಯಾರ್ಥಿಗಳು

Update: 2020-02-03 17:52 IST

ಮಂಡ್ಯ, ಫೆ.3: ವಿದ್ಯಾರ್ಥಿಗಳ ಹೋರಾಟಕ್ಕೆ ಜಯ ಸಿಕ್ಕಿದ್ದು, ಮಂಡ್ಯ ವಿಶ್ವವಿದ್ಯಾಲನಿಲದಯಡಿಯಲ್ಲೇ ಪರೀಕ್ಷೆ ನಡೆಸಲಾಗುವುದು ಎಂದು ವಿವಿ ವಿಶೇಷಾಧಿಕಾರಿ ಪ್ರೊ.ಕೆ.ಎನ್.ನಿಂಗೇಗೌಡ ಭರವಸೆ ನೀಡಿದ್ದಾರೆ.

ಎರಡು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು, ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಆವ್ಮರಣಾಂತ ಉಪವಾಸ ಕೈಗೊಳ್ಳುವುದಾಗಿ ಎಚ್ಚರಿಸಿ ಸೋಮವಾರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ಇದರ ಬೆನ್ನಲ್ಲೇ ಸ್ಥಳಕ್ಕಾಗಮಿಸಿದ ವಿವಿ ವಿಶೇಷಾಧಿಕಾರಿ ನಿಂಗೇಗೌಡ, ಕೂಡಲೇ ಸರಕಾರಕ್ಕೆ ಪತ್ರ ಬರೆದು ವಿವಿ ಅಡಿಯಲ್ಲೇ ಪರೀಕ್ಷೆ ನಡೆಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ನಂತರ, ವಿದ್ಯಾರ್ಥಿ ಮುಖಂಡರ ಸಭೆ ಕರೆದು ಸಮಸ್ಯೆ ಮತ್ತು ಬೇಡಿಕೆಗಳನ್ನು ಆಲಿಸಿದ ಅವರು, ಬೇಡಿಕೆಗಳ ಈಡೇರಿಸಲಾಗುವುದು ಎಂದರು. ನಂತರ, ವಿದ್ಯಾರ್ಥಿಗಳು ಧರಣಿ ಹಿಂಪಡೆದರು.

ಮಂಡ್ಯ ವಿವಿಯಡಿಯಲ್ಲಿ ಸಿ-1, ಸಿ-2 ಪರೀಕ್ಷೆ ನಡೆಸಲಾಗಿದ್ದು, ಸಿ3 ಪರೀಕ್ಷೆಯನ್ನು ಸರಕಾರಿ ಮಹಾವಿದ್ಯಾಲಯದಿಂದ ಘೋಷಿಸಲಾಗಿತ್ತು. ಮಂಡ್ಯ ವಿವಿ ಅಡಿಯಲ್ಲೇ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು.

ಸರಕಾರಿ ಮಹಾವಿದ್ಯಾಲಯವನ್ನು ಮಂಡ್ಯ ವಿಶ್ವವಿದ್ಯಾಲಯವಾಗಿ ಘೋಷಿಸಿ, ಎರಡು ಪರೀಕ್ಷೆ ನಂತರ ರದ್ದುಪಡಿಸಿರುವ ಕ್ರಮವನ್ನು ವಿದ್ಯಾರ್ಥಿ ಮತ್ತು ಪ್ರಗತಿಪರ ಸಂಘಟನೆಗಳು ಪ್ರತಿಭಟನಿಗಿಳಿದಿವೆ. ಸರಕಾರ ವಿವಿ ಮುಚ್ಚುವ ಹುನ್ನಾರ ನಡೆಸಿದೆ ಎಂದು ಆರೋಪಿಸಿವೆ.

ಈಗ ಮಂಡ್ಯ ವಿವಿಯಡಿಯಲ್ಲೇ ಸಿ-3 ಪರೀಕ್ಷೆ ನಡೆಸಲಾಗುವುದು ಹಾಗೂ ವಿದ್ಯಾರ್ಥಿಗಳ ಇತರ ಬೇಡಿಕೆಗಳ ಈಡೇರಿಕೆ ಬಗ್ಗೆಯೂ ಸರಕಾರದ ಗಮನ ಸೆಳೆಯಲಾವುದು ಎಂದು ವಿವಿ ವಿಶೇಷಾಧಿಕಾರಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News