ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಬಂಧನ ಖಂಡಿಸಿ ಪ್ರತಿಭಟನೆ

Update: 2020-02-03 12:36 GMT

ಮಂಡ್ಯ, ಫೆ.3: ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಅಕ್ಷರ ದಾಸೋಹ ನೌಕರರ ಪ್ರತಿಭಟನೆಗೆ ನಿರ್ಬಂಧ ಹಾಗೂ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಅವರ ಬಂಧನ ಖಂಡಿಸಿ ಸಿಪಿಐ(ಎಂ) ಕಾರ್ಯಕರ್ತರು ಸೋಮವಾರ ಮದ್ದೂರಿನ ಪ್ರವಾಸಿಮಂದಿರದ ಬಳಿ ಪ್ರತಿಭಟನೆ ನಡೆಸಿದರು.

ಸಿಪಿಎಂ ಮುಖಂಡ ಟಿ.ಯಶವಂತ ಮಾತಾನಾಡಿ ,ಮನಸೋ ಇಚ್ಛೆ 144 ಸೆಕ್ಷನ್ ಮೂಲಕ ನಿಷೇದಾಜ್ಞೆ ಹಾಕುವ ಕ್ರಮವನ್ನು ಸುಪ್ರೀಂಕೋರ್ಟ್ ಖಂಡಿಸಿದ ಮೇಲೂ ಬಿಜೆಪಿ ಸರಕಾರ ಶಾಂತಿಯುತ ಪ್ರತಿಭಟನೆ ಮೇಲೆ ದಮನ ನಡೆಸುತ್ತಿದೆ. ಯಾವುದೇ ದಮನದಿಂದಲೂ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ಕೂಡಲೇ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಅವರನ್ನು ಬಿಡುಗಡೆ ಮಾಡಿ, ಅಕ್ಷರ ದಾಸೋಹ ನೌಕರರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. 

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿ.ಪ್ರದೀಪ್, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶೋಭ, ಜವರೇಗೌಡ, ಲತಾ, ಚಂದ್ರಮ್ಮ, ಸುನಂದಾ, ಕರ್ನಾಟಕ ಪ್ರಾಂತ ರೈತ ಸಂಘದ ಅವಿನಾಶ್, ಭಾನುಪ್ರಕಾಶ್, ಕೆಂಪರಾಜು, ಮುತ್ತುರಾಜು, ಪುಟ್ಟಲಿಂಗಯ್ಯ, ನಾಗರತ್ನಮ್ಮ, ಪ್ರಭಾವತಿ, ಸುಮತಿ, ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News