ಬಾಳುಗೋಡು ವಸತಿ ರಹಿತರ ಗುಡಿಸಲು ತೆರವು ಪ್ರಕರಣ: ಮುಂದುವರಿದ ನಿರಾಶ್ರಿತರ ಪ್ರತಿಭಟನೆ

Update: 2020-02-06 18:01 GMT

ಸಿದ್ದಾಪುರ (ಕೊಡಗು), ಫೆ.6: ಕೊಡಗಿನ ವೀರಾಜಪೇಟೆ ತಾಲೂಕಿನ ಬಾಳುಗೋಡುವಿನಲ್ಲಿ ವಸತಿ ರಹಿತರ ಗುಡಿಸಲುಗಳನ್ನು ತೆರವುಗೊಳಿಸಿದ ಸ್ಥಳದಲ್ಲೇ ನಿರಾಶ್ರಿತರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

ವಸತಿ ರಹಿತರು ಹಾಕಿಕೊಂಡಿದ್ದ ಗುಡಿಸಲುಗಳನ್ನು ಬುಧವಾರ ಮಧ್ಯಾಹ್ನ ತಾಲೂಕಾಡಳಿತ ತೆರವುಗೊಳಿಸಲಾಗಿತ್ತು. ಆದಿವಾಸಿ, ದಲಿತ ಹಾಗೂ ಹಿಂದುಳಿದ ವರ್ಗಗಳ ನಿವೇಶನರಹಿತ ಕುಟುಂಬಳ ಮ್ಕಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಗುಡಿಸಲುಳನ್ನು ತೆರವುಗೊಳಿಸಿದ ಜಾಗದಲ್ಲಿಯೇ ಹೋರಾಟಕ್ಕಾಗಿ ಶೆಡ್ ನಿರ್ಮಿಸಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಪ್ರಮುಖ ಪಾಲೇಮಾಡು ಮೊಣ್ಣಪ್ಪ ಮಾತನಾಡಿ, ಕೂಲಿ ಕೆಲಸ ಮಾಡಿ, ಸಾಲ ಪಡೆದು ಕಟ್ಟಿದ್ದ ಗುಡಿಸಲುಳನ್ನು ಧ್ವಂಸ ಮಾಡಿ ಬವರನ್ನು ಆಳಿತ ವ್ಯವಸ್ಥೆ ಬೀದಿಗೆ ತಳ್ಳಿರುವುದು ಅತ್ಯಂತ ಖಂಡನೀಯ. ಕೂಡಲೇ ಸರಕಾರ ಹಾಗೂ ಜಿಲ್ಲಾಡಳಿತ ಇದೇ ಜಾಗದಲ್ಲೆ ನಿವೇಶನ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳ್ಳಲಿದ್ದು, 2ನೇ ದಿಡ್ಡಳ್ಳಿ ಮಾದರಿ ಹೋರಾಟಕ್ಕೆ ಕರೆ ನೀಡುವುದಾಗಿ ಎಚ್ಚರಿಸಿದರು.

ಇದುವರೆಗೂ ನಮಗೆ ವಾಸಿಸಲು ಮನೆ ಇದೆಯೇ ಎಂಬುದನ್ನು ಕೇಳಲು ಬಾರದ ಅಧಿಕಾರಿರಿಳು ಇದೀಗ ಬಂದು ನಮ್ಮ ಗುಡಿಸಲುಗಳನ್ನು ಧ್ವಂಸ ಮಾಡಿದ್ದಾರೆ. ಗುಡಿಸಲಿನ ಒಳಗಿದ್ದ ಆಹಾರ ಧಾನ್ಯಗಳನ್ನು ಹೊರಗೆ ಚೆಲ್ಲಿದ್ದಾರೆ. ನಮಗೆ ನ್ಯಾಯ ಕೊಡುವವರು ಯಾರು? ಬಡವರಿಗೆ ಭೂಮಿ ಮೇಲೆ ಬದುುವ ಹಕ್ಕು ಇಲ್ಲವೇ? ಎಂದು ನಿರಾಶ್ರಿತೆ ಶೋಭಾ ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಆದಿವಾಸಿ ಸಮನ್ವಯ ಸಮಿತಿಯ ವೈ.ಕೆ ಗಣೇಶ್, ಪ್ರಮುಖರಾದ ಗೀತಾ, ಹರೀಶ್, ನಳಿನಿ, ತುಳಸಿ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News