ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಅಲ್ ಖೈದಾ ಮುಖಂಡ ಸಾವು: ಟ್ರಂಪ್ ಘೋಷಣೆ

Update: 2020-02-07 05:14 GMT

ವಾಷಿಂಗ್ಟನ್ : ಅಮೆರಿಕದ ಪಡೆಗಳು ಯೆಮನ್‌ನಲ್ಲಿ ನಡೆಸಿದ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಲ್ಲಿ ಆಲ್‌ಖೈದಾ ಇನ್ ಅರೇಬಿಯನ್ ಪೆನಿನ್ಸುಲಾ (ಎಕ್ಯೂಎಪಿ) ಮುಖಂಡ ಖಾಸಿಂ ಅಲ್ ಮಿ ಎಂಬಾತ ಬಲಿಯಾಗಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.

"ಯೆಮನ್‌ನಲ್ಲಿ ನಾಗರಿಕರ ಮೇಲೆ ಎಕ್ಯೂಎಪಿ ಸಂಘಟನೆ ದಬ್ಬಾಳಿಕೆ ನಡೆಸುತ್ತಿತ್ತು. ಜತೆಗೆ ಅಮೆರಿಕ ಹಾಗೂ ನಮ್ಮ ಪಡೆಗಳ ಮೇಳೆ ದಾಳಿಗೆ ಕುಮ್ಮಕ್ಕು ನೀಡಲಾಗುತ್ತಿತ್ತು" ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ.

"ಈತನ ಸಾವಿನಿಂದ ಎಕ್ಯೂಎಪಿ ಹಾಗೂ ಆಲ್ ಖೈದಾ ಚಳವಳಿ ಮತ್ತಷ್ಟು ದುರ್ಬಲವಾಗಿದೆ. ದೇಶದ ಭದ್ರತೆಗೆ ಈ ಗುಂಪುಗಳು ತಂದೊಡ್ಡಿರುವ ಅಪಾಯವನ್ನು ಬಗೆಹರಿಸುವ ಹಂತಕ್ಕೆ ನಾವು ಬಂದಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News