ಕಾರಿನ ಗ್ಲಾಸ್ ಒಡೆದು 1.9 ಲಕ್ಷ ರೂ. ಕಳ್ಳತನ

Update: 2020-02-08 18:15 GMT

ದಾವಣಗೆರೆ, ಫೆ.8: ನಿಂತಿದ್ದ ಕಾರಿನ ಗ್ಲಾಸ್ ಒಡೆದು ಒಂದು ಲಕ್ಷ 90 ಸಾವಿರ ರೂ. ಕಳ್ಳತನ ಮಾಡಿರುವ ಘಟನೆ ನಗರದ ಪಿಬಿ ರಸ್ತೆಯ ಸುಲ್ತಾನ್ ಗೋಲ್ಡ್ ಶಾಪ್ ಎದುರು ನಡೆದಿದೆ.

ಬೆಂಗಳೂರು ಮೂಲದ ಮಹೇಶ ಎಂಬ ಗುತ್ತಿಗೆದಾರ ಹಣ ಕಳೆದುಕೊಂಡವರು. ಕಾರಿನ ಗ್ಲಾಸ್ ಒಡೆದು ಡ್ಯಾಶ್ ಬೋರ್ಡ್ ನಲ್ಲಿ ಇಟ್ಟಿದ್ದ ಹಣ ಕದ್ದು ಪರಾರಿಯಾಗಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.  

ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News