ಮುಖ್ಯಮಂತ್ರಿ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ: ಸಚಿವ ಶ್ರೀರಾಮುಲು
Update: 2020-02-08 23:47 IST
ದಾವಣಗೆರೆ, ಫೆ.8: ನನಗೂ ಡಿಸಿಎಂ ಆಗುವ ಆಸೆ ಇದೆ, ಮುಂದಿನ ದಿನಗಳಲ್ಲಿ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಒತ್ತಡದಲ್ಲಿ ಮುಜುಗರ ತರುವ ಕೆಲಸ ಮಾಡಲ್ಲ. ಡಿಸಿಎಂ ಆಗುವ ಇದೆ. ಅವಕಾಶ ಮುಂದೆ ಬರುತ್ತದೆ. ವಾಲ್ಮೀಕಿ ಸಮಾಜಕ್ಕೆ ಯಡಿಯೂರಪ್ಪ ಅವಕಾಶ ಕೊಡುತ್ತಾರೆ. ಕೊಟ್ಟ ಮಾತನ್ನು ಯಾವತ್ತು ಸಿಎಂ ತಪ್ಪುವುದಿಲ್ಲ. ನಮ್ಮ ವಾಲ್ಮೀಕಿ ಸಮಾಜಕ್ಕೆ ನ್ಯಾಯ ಕೊಡುತ್ತಾರೆ ಎಂದರು.
ಶಾಮನೂರು ಆಂಜನೇಯನ ದರ್ಶನ
ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ಸಚಿವ ಶ್ರೀರಾಮುಲು ಅವರು ದಾವಣಗೆರೆಯ ಹೊರ ವಲಯದಲ್ಲಿರುವ ಶಾಮನೂರು ಗ್ರಾಮಕ್ಕೆ ಭೇಟಿ ನೀಡಿ, ಅಂಜನೇಯನ ಹಾಗೂ ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನ ಹೊರಗೆ ಇರುವ ನಾಗಣ್ಣನ ಹೋಟೆಲ್ ನಲ್ಲಿ ಮಂಡಕ್ಕೆ ಒಗ್ಗರಣೆ, ಮೆಣಸಿನಕಾಯಿ ಸವಿದರು.