ದಕ್ಷಿಣ ಅಮೆರಿಕದ ಅತ್ಯುನ್ನತ ಶಿಖರ ಏರಿ ವಿಶ್ವದಾಖಲೆ ಸ್ಥಾಪಿಸಿದ ಮುಂಬೈ ಬಾಲಕಿ

Update: 2020-02-10 04:08 GMT

ಹೊಸದಿಲ್ಲಿ, ಫೆ.10: ಮುಂಬೈನ ನೌಕಾಪಡೆ ಸಿಬ್ಬಂದಿಯ ಮಕ್ಕಳ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಕಾಮ್ಯ ಕಾರ್ತಿಕೇಯನ್ ದಕ್ಷಿಣ ಅಮೆರಿಕದ ಅತ್ಯುನ್ನತ ಶಿಖರ ಮೌಂಟ್ ಅಕೋಂಕೋವಾ ಏರುವ ಮೂಲಕ ವಿಶ್ವದಾಖಲೆ ಸ್ಥಾಪಿಸಿದ್ದಾಳೆ. ಈ ಶಿಖರ ಏರಿದ ಅತಿ ಕಿರಿಯ ವಯಸ್ಸಿನ ಬಾಲಕಿ ಎಂಬ ಹೆಗ್ಗಳಿಕೆ ಈಕೆಯದ್ದು ಎಂದು ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ.

6962 ಮೀಟರ್ ಎತ್ತರದ ಮೌಂಟ್ ಅಕೋಂಕೋವಾ ಪರ್ವತ ಏಶ್ಯದ ಹೊರಗೆ ಇರುವ ಅತಿ ಎತ್ತರದ ಪರ್ವತವಾಗಿದೆ. ಕಾಮ್ಯಾ ಫೆಬ್ರವರಿ 1ರಂದು ಈ ಪರ್ವತ ಏರಿ ತ್ರಿವರ್ಣ ಧ್ವಜ ಹಾರಿಸಿದ್ದಾಳೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹಲವು ವರ್ಷಗಳ ಮಾನಸಿಕ ಹಾಗೂ ದೈಹಿಕ ಸಿದ್ಧತೆಯಿಂದ, ನಿರಂತರವಾಗಿ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಈ ಅಮೋಘ ಸಾಧನೆ ಮಾಡಿದ್ದಾಳೆ. ಹಲವು ಆಡಳಿತಾತ್ಮಕ ಅಡೆತಡೆ ಮತ್ತು ಪ್ರತಿಕೂಲದ ಸ್ಥಿತಿಯಲ್ಲಿ ಪರ್ವತಾರೋಹಣ ಮಾಡಿ ಈ ಅತ್ಯಪೂರ್ವ ಸಾಧನೆ ಮಾಡಿದ್ದಾಳೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News