ದಕ್ಷಿಣ ಕೊಡಗಿನಲ್ಲಿ ಮುಂದುವರಿದ ಹುಲಿ ದಾಳಿ: 3 ಹಸುಗಳು ಬಲಿ
Update: 2020-02-12 17:14 IST
ಮಡಿಕೇರಿ, ಫೆ.12: ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಕಳೆದ ಒಂದು ವಾರದಲ್ಲಿ ಮೂರು ಹಸುಗಳು ಬಲಿಯಾಗಿವೆ.
ನಾಲ್ಕೇರಿ ಗ್ರಾಮದ ಸೊಡ್ಲೂರ್ ಕೇರಿಯ ಮುಕ್ಕಾಟಿರ ದೀಪ ಎಂಬುವವರಿಗೆ ಸೇರಿದ ಗಬ್ಬದ ಹಸುವೊಂದು ಇಂದು ಹುಲಿ ದಾಳಿಗೆ ಜೀವ ಕಳೆದುಕೊಂಡಿದೆ. ಇವರದ್ದೇ ಮತ್ತೊಂದು ಹಸುವನ್ನು ನಾಲ್ಕು ದಿನಗಳ ಹಿಂದೆಯಷ್ಟೇ ಹುಲಿ ಬಲಿ ತೆಗೆದುಕೊಂಡಿತ್ತು.
ಇದೇ ಗ್ರಾಮದ ತೀತಿರ ರವಿ ಎಂಬುವವರಿಗೆ ಸೇರಿದ ಹಸುವನ್ನು ಒಂದು ವಾರದ ಹಿಂದೆ ಹುಲಿ ಭಕ್ಷಿಸಿತ್ತು. ವನ್ಯಜೀವಿ ದಾಳಿಯಿಂದ ಆತಂಕಗೊಂಡಿರುವ ಗ್ರಾಮಸ್ಥರು ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.