'ಕರ್ನಾಟಕ ಬಿಜೆಪಿ' ಖಾತೆ ಬ್ಲಾಕ್ ಮಾಡಿದ ಟ್ವಿಟರ್
ಬೆಂಗಳೂರು, ಫೆ.12: ಪ್ರಗತಿಪರರ ಬಗ್ಗೆ ಸತ್ಯವನ್ನು ಹೇಳಿದ್ದಕ್ಕಾಗಿ ನಮ್ಮ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ ಎಂದು ಬಿಜೆಪಿ ತಿಳಿಸಿದೆ.
ಸೋಮವಾರದಿಂದ ಯಾವುದೇ ಟ್ವೀಟ್ ಮಾಡದ 'ಕರ್ನಾಟಕ ಬಿಜೆಪಿ' ಖಾತೆ ಇಂದು ಟ್ವೀಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಗತಿಪರರ ಬಗ್ಗೆ ಸತ್ಯವನ್ನು ಹೇಳಿದ್ದಕ್ಕಾಗಿ ನಮ್ಮ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿರುವುದು ದುರದೃಷ್ಟಕರ ಎಂದು ತಿಳಿಸಿದೆ.
"ಆತ್ಮೀಯ ಸ್ನೇಹಿತರೆ, ಪ್ರಗತಿಪರರ ಬಗ್ಗೆ ಸತ್ಯವನ್ನು ಹೇಳಿದ್ದಕ್ಕಾಗಿ ನಮ್ಮ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿರುವುದು ದುರದೃಷ್ಟಕರ. ಆದರೆ ಸತ್ಯವನ್ನು ಹೊರತರುವ ನಮ್ಮ ಪ್ರಯತ್ನದಿಂದ ನಾವು ಹಿಂದೆ ಸರಿಯುವುದಿಲ್ಲ. ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದಗಳು. ಸತ್ಯಮೇವ ಜಯತೆ! ಜೈ ಹಿಂದ್ ಎಂದು ಟ್ವೀಟ್ ಮಾಡಿದೆ.
ಬ್ಲಾಕ್ ಹಿಂಪಡೆದ ಟ್ವಿಟರ್: ಸೋಮವಾರ 'ಕರ್ನಾಟಕ ಬಿಜೆಪಿ' ಖಾತೆಯನ್ನು ಟ್ವಿಟರ್ ಬ್ಲಾಕ್ ಮಾಡಿದ್ದು, ಎರಡು ದಿನಗಳವರೆಗೆ ಇದು ಮಂದುವರೆದಿತ್ತು. ಆದರೆ ಇಂದು (ಬುಧವಾರ) ಖಾತೆ ಸರಿಯಾಗಿದೆ.