72 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ: ಸಚಿವ ಜಗದೀಶ್ ಶೆಟ್ಟರ್

Update: 2020-02-14 17:07 GMT

ಹುಬ್ಬಳ್ಳಿ, ಫೆಬ್ರವರಿ 14: ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ ನಿರೀಕ್ಷೆಗೂ ಮೀರಿದ ಯಶಸ್ವಿಯಾಗಿದ್ದು, ಒಟ್ಟು 51 ಕಂಪೆನಿಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ವೆಸ್ಟ್ ಕರ್ನಾಟಕ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, 1500ಕ್ಕೂ ಹೆಚ್ಚು ಉದ್ಯಮಿಗಳು ಆಗಮಿಸಿದ್ದರು. 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪೆನಿಯು ಈ ಸಮಾವೇಶದ ಯಶಸ್ವಿಗೆ ಸಾಕ್ಷಿಯಾದವು.

ಒಟ್ಟು ಸಮಾವೇಶದಲ್ಲಿ 51ಕಂಪೆನಿಗಳೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಗಿದ್ದು, 72 ಸಾವಿರ ಕೋಟಿ ರೂ.ಹೂಡಿಕೆ ಹರಿದು ಬರಲಿದೆ. ಇದರಿಂದ 90 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಕಂಪೆನಿಗಳು: ರಾಜೇಶ್ ಎಕ್ಸ್‌ಫೋರ್ಟ್ಸ್ ಲಿ. 50 ಸಾವಿರ ಕೋಟಿ ರೂ., ಸೊನಾಲಿ ಪವರ್ ಪ್ರೈವೇಟ್ ಲಿ.ಕಂಪೆನಿಯು 4,800 ಕೋಟಿ ರೂ., ನ್ಯಾಟ್‌ಕ್ಯಾಪ್ ಪವರ್ ಪ್ರೈವೇಟ್ ಲಿ. 3 ಸಾವಿರ ಕೋಟಿ ರೂ., ಜೆಟ್‌ವಿಂಗ್ಸ್ ಏರೋಸ್ಪೇಸ್ ಆ್ಯಂಡ್ ಏವಿಯೇಷನ್ 2,060 ಕೋಟಿ ರೂ., ಅಯನಾ ರಿನಿವೆಬಲ್ ಪವರ್ ಪ್ರೈವೇಟ್ ಲಿ. 3 ಸಾವಿರ ಕೋಟಿ ರೂ., ಲುಗ್ಸೋರ್ ಎನರ್ಜಿ ಪ್ರೈವೇಟ್ ಲಿ. 1,200ಕೋಟಿ ರೂ. ಸೇರಿ ಭಾಗೀರಥ ಕೆಮಿಕಲ್ಸ್, ಎಚ್‌ಪಿಸಿ, ಐಒಸಿ, ಪವರ್ ರಿನ್ಯೂ, ಗುಜರಾತ್ ಅಂಬುಜಾ, ಕೆಎಲ್ಇ ಸೊಸೈಟಿ, ದೋಡ್ಲಾ ಡೈರಿ, ಎಸಿಸಿ ಲಿ., ಡೆಪೆಡ್ರೊ ಶುಗರ್, ವುಕ್ಸಿ ಮೆಂಗ್ಯಾಂಗ್ ಮೆಷಿನರಿ ಕಂಪೆನಿಗಳು ಒಳಗೊಂಡಿವೆ ಎಂದು ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News