ಪ್ರೇಮ ವಿವಾಹ ಆಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಕಾಲೇಜು ವಿದ್ಯಾರ್ಥಿನಿಯರು !

Update: 2020-02-15 07:56 GMT

ಅಮರಾವತಿ, ಫೆ.15: ಪ್ರೇಮಿಗಳ ದಿನವಾದ ಫೆ.14ರಂದು ಮಹಾರಾಷ್ಟ್ರದ  ಮಹಿಳಾ ಕಾಲೇಜಿನ  ವಿದ್ಯಾರ್ಥಿನಿಯರು ಪ್ರೇಮ ವಿವಾಹ ಪರಿಕಲ್ಪನೆಯ ವಿರುದ್ಧ ಪ್ರತಿಜ್ಞೆ ಸ್ವೀಕರಿಸಿ ಗಮನ ಸೆಳೆದಿದ್ದಾರೆ. ಅಮರಾವತಿಯ ಚಂದೂರ್ ರೈಲ್ವೆ ನಿಲ್ದಾಣದ ಬಳಿಯಿರುವ ಮಹಿಳಾ ಕಲಾ ಹಾಗೂ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯರು ಮರಾಠಿ ಭಾಷೆಯಲ್ಲಿ, ನಾವು ಯಾರನ್ನೂ ಪ್ರೀತಿಸುವುದಿಲ್ಲ. ಯಾರೊಂದಿಗೂ ಪ್ರೀತಿಯ ವ್ಯವಹಾರವಾಗಲಿ ಅಥವಾ ಪ್ರೇಮ ವಿವಾಹವಾಗುವುದಾಗಲಿ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

‘‘ನಾನು ಸಂಪೂರ್ಣವಾಗಿ ಹೆತ್ತವರ ಮೇಲೆ ನಂಬಿಕೆ ಇಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೇನೆ. ನಾನು ಯಾರನ್ನೂ ಪ್ರೀತಿಸುವುದಿಲ್ಲ ಹಾಗೂ ಪ್ರೇಮವಿವಾಹವನ್ನು ಆಗುವುದಿಲ್ಲ. ವರದಕ್ಷಿಣೆ ಕೇಳುವವರನ್ನು ವಿವಾಹವಾಗುವುದಿಲ್ಲ ಎಂದು ಪ್ರಮಾಣಸ್ವೀಕರಿಸಿದ್ದೇನೆ’’ ಎಂದು ಕಾಲೇಜು ಕನ್ಯೆಯೊಬ್ಬರು ತಿಳಿಸಿದ್ದಾರೆ.

ನಾವು ಯಾರನ್ನೇ ಪ್ರೀತಿಸಲಿ, ಅವರು ನಮಗೆ ಉತ್ತಮವಾಗಿರಬೇಕು. ಸ್ವಾವಲಂಬಿಯಾಗಿರಬೇಕು. ಪ್ರೀತಿಯ ವಿಚಾರಕ್ಕೆ ಕುಟುಂಬದವರ ಸಲಹೆ ಪಡೆಯುವುದು ಯಾವಾಗಲೂ ಉತ್ತಮ ಹೆಜ್ಜೆ ಎಂದು ವಿದ್ಯಾರ್ಥಿನಿ ರಿತಿಕಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News