ಭಾರತಕ್ಕೆ ಹೋಗುವುದನ್ನು ಎದುರುನೋಡುತ್ತಿದ್ದೇನೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Update: 2020-02-15 15:26 GMT

ವಾಶಿಂಗ್ಟನ್, ಫೆ. 15: ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗುವುದಕ್ಕಾಗಿ ಭಾರತಕ್ಕೆ ಹೋಗುವುದನ್ನು ಎದುರುನೋಡುತ್ತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

‘‘ದೊಡ್ಡ ಗೌರವ ಎಂದು ನಾನು ಭಾವಿಸುತ್ತೇನೆ. ‘ಫೇಸ್‌ಬುಕ್‌ನಲ್ಲಿ ಡೊನಾಲ್ಡ್ ಜೆ. ಟ್ರಂಪ್ ನಂಬರ್ ವನ್ ಮತ್ತು ಭಾರತದ ಪ್ರಧಾನಿ ಮೋದಿ ನಂಬರ್ 2’ ಎಂಬುದಾಗಿ ಮಾರ್ಕ್ ಝುಕರ್‌ಬರ್ಗ್ ಇತ್ತೀಚೆಗೆ ಹೇಳಿದ್ದಾರೆ. ನಾನು ಇನ್ನೆರಡು ವಾರಗಳಲ್ಲಿ ಭಾರತಕ್ಕೆ ಹೋಗುತ್ತಿದ್ದೇನೆ. ಅದನ್ನು ಎದುರುನೋಡುತ್ತಿದ್ದೇನೆ!’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಎರಡು ದಿನಗಳ ಪ್ರವಾಸಕ್ಕಾಗಿ ಫೆಬ್ರವರಿ 24 ಮತ್ತು 25ರಂದು ಭಾರತದಲ್ಲಿರುತ್ತಾರೆ. ತಮ್ಮ ಪ್ರವಾಸದ ವೇಳೆ ಅವರು ಅಹ್ಮದಾಬಾದ್ ಮತ್ತು ಹೊಸದಿಲ್ಲಿಗೆ ಭೇಟಿ ನೀಡುತ್ತಾರೆ.

ಟ್ರಂಪ್ ಅಹ್ಮದಾಬಾದ್‌ಗೆ ಆಗಮಿಸುವಾಗ ಲಕ್ಷಾಂತರ ಜನರು ಅವರನ್ನು ಸ್ವಾಗತಿಸುತ್ತಾರೆಂದು ನಿರೀಕ್ಷಿಸಲಾಗಿದೆ. ಅಹ್ಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಮೊಟೇರ ಸ್ಟೇಡಿಯಂನಲ್ಲಿ ಟ್ರಂಪ್ ಮತ್ತು ಮೋದಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ ಎನ್ನಲಾಗಿದೆ. ಮೊಟೇರ ಸ್ಟೇಡಿಯಂ ಜಗತ್ತಿನಲ್ಲೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News