ಹನೂರು: ಬಸ್ ನಿಲ್ದಾಣದ ಬಳಿ ನವಜಾತ ಶಿಶು ಪತ್ತೆ
Update: 2020-02-17 10:46 IST
ಹನೂರು, ಫೆ.17: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಸಮೀಪದ ಕೆಂಪಯ್ಯನಹಟ್ಟಿಯಲ್ಲಿ ನವಜಾತ ಗಂಡು ಶಿಶುವೊಂದರ ಮೃತದೇಹ ಕಸದ ಮಧ್ಯೆ ಪತ್ತೆಯಾಗಿರುವುದು ವರದಿಯಾಗಿದೆ.
ಕೌದಳ್ಳಿಯ ಕೆಂಪಯ್ಯನಹಟ್ಟಿ ಬಸ್ ನಿಲ್ದಾಣದ ಬಳಿ ನವಜಾತ ಮಗು ಪತ್ತೆಯಾಗಿದೆ. ಮಗುವನ್ನು ರಾತ್ರಿ ಯಾರೂ ಅಲ್ಲಿ ಬಿಸಾಕಿದ್ದು, ಇಂದು ಬೆಳಗ್ಗೆ ಸಾರ್ವಜನಿಕರ ಗಮನಕ್ಕೆ ಬರುವಷ್ಟರಲ್ಲಿ ಮಗು ಮೃತಪಟ್ಟಿತ್ತು.
ಘಟನಾ ಸ್ಥಳಕ್ಕೆ ರಾಮಪುರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.