ಟ್ರಂಪ್ ಭೇಟಿ: 500 ಕ್ಯೂಸೆಕ್ಸ್ ನೀರು ಬಳಸಿ ಯಮುನಾ ನದಿ ಪರಿಸರ ಸ್ವಚ್ಛತೆಗಿಳಿದ ಉ.ಪ್ರದೇಶ ಸರಕಾರ

Update: 2020-02-19 06:49 GMT

ಮಥುರಾ, ಫೆ.19: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಆಗ್ರಾದ ಯಮುನಾ ನದಿ ‘ಪರಿಸರದ ಪರಿಸ್ಥಿತಿ’ ಸುಧಾರಿಸಲು ಉತ್ತರಪ್ರದೇಶದ ನೀರಾವರಿ ಇಲಾಖೆ ಬುಲಂದ್‌ಶಹರ್‌ನ ಗಂಗಾನಹರ್‌ನಿಂದ ಯಮುನಾ ನದಿಗೆ 500 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಿದೆ.

ಟ್ರಂಪ್ ಫೆ.24ರಿಂದ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಭೇಟಿಯ ವೇಳೆ ಉತ್ತರಪ್ರದೇಶದ ಆಗ್ರಾ ಹಾಗೂ ಗುಜರಾತ್‌ನ ಅಹ್ಮದಾಬಾದ್ ನಗರಕ್ಕೆ ಭೇಟಿ ನೀಡಲಿದ್ದಾರೆ.

‘‘ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯಮುನಾ ನದಿಯ ಪರಿಸರ ಪರಿಸ್ಥಿತಿಯನ್ನು ಸರಿಪಡಿಸಲು ಗಂಗಾನಹರ್‌ನಿಂದ 500 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ. ನೀರು ಫೆ.20ರಂದು ಮಥುರಾದಲ್ಲಿರುವ ಯಮುನಾ ನದಿಗೆ ತಲುಪಲಿದೆ. ಫೆ.21ರ ಮಧ್ಯಾಹ್ನ ಆಗ್ರಾಕ್ಕೆ ತಲುಪಲಿದೆ’’ ಎಂದು ನೀರಾವರಿ ಇಲಾಖೆಯ ಇಂಜಿನಿಯರ್ ಧಮೇಂದ್ರ ಸಿಂಗ್ ಫೋಗಟ್ ಹೇಳಿದ್ದಾರೆ.

500 ಕ್ಯೂಸೆಕ್ಸ್ ನದಿ ನೀರು ಬಿಡುಗಡೆಯಿಂದಾಗಿ ಯಮುನಾ ನದಿಯಲ್ಲಿ ಕೆಟ್ಟ ವಾಸನೆ ಕಡಿಮೆ ಆಗುವ ಸಾಧ್ಯತೆಯಿದೆ. ಇದರಿಂದ ಯಮುನಾ, ಮಥುರಾ ಹಾಗೂ ಆಗ್ರಾದಲ್ಲಿ ಆಮ್ಲಜನಕ ಮಟ್ಟದಲ್ಲಿ ಸುಧಾರಣೆಯಾಗಲಿದೆ. ಈ ಹೆಜ್ಜೆಯಿಂದ ಯಮುನಾ ನದಿಯ ನೀರು ಕುಡಿಯಲು ಸೂಕ್ತವಾಗದು. ಆದರೆ, ಇದು ನದಿನೀರಿನ ವಾಸನೆಯನ್ನು ಕಡಿಮೆಗೊಳಿಸಲಿದೆ ಎಂದು ಉತ್ತರಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಅಭಿಯಂತರ ಅರವಿಂದ ಕುಮಾರ್ ಹೇಳಿದ್ದಾರೆ.

Writer - 500 ಕ್ಯೂಸೆಕ್ಸ್ ನೀ

contributor

Editor - 500 ಕ್ಯೂಸೆಕ್ಸ್ ನೀ

contributor

Similar News