ಒವೈಸಿಯನ್ನು ಪೋಷಣೆ ಮಾಡುತ್ತಿರುವುದೇ ಕಾಂಗ್ರೆಸ್: ಸಚಿವ ಶ್ರೀರಾಮುಲು

Update: 2020-02-22 11:51 GMT

ಬಳ್ಳಾರಿ, ಫೆ.22: ನಮ್ಮ ದೇಶದಲ್ಲೇ ಪಾಕಿಸ್ತಾನ ಪರ ಕೂಗಿಸೋದಕ್ಕೆ ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ ಯಾರು. ಆತ ಪಾಕಿಸ್ತಾನದ ಪ್ರತಿನಿಧಿಯೇ ಎಂದು ಸಚಿವ ಶ್ರೀರಾಮುಲು ಪ್ರಶ್ನಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಕೂಗುವವರು ಆ ದೇಶಕ್ಕೆ ಹೋಗಲಿ. ಅಲ್ಲದೆ, ಇಲ್ಲಿನ ಬಹುಸಂಖ್ಯಾತ ಹಿಂದೂಗಳು ನಿಮ್ಮಂತೆ ಕೂಗಿದರೆ, ಘೋಷಣೆಗಳು ಮುಗಿಲು ಮುಟ್ಟಲಿದೆ ಎಂದರು.

ಒವೈಸಿಯನ್ನು ಪೋಷಣೆ ಮಾಡುತ್ತಿರುವುದೇ ಕಾಂಗ್ರೆಸ್ ಪಕ್ಷ ಎಂದ ಅವರು, ನಾವು ಭಾರತೀಯರು ಒಂದೇ ತಾಯಿ ಮಕ್ಕಳಿದ್ದಂತೆ. ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಒವೈಸಿಯನ್ನು ದೊಡ್ಡ ಮನುಷ್ಯ ಅಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News