'ಪಾಕಿಸ್ತಾನ ಝಿಂದಾಬಾದ್' ಘೋಷಣೆ ಹಿಂದೆ ಸಂಘಟನೆಗಳ ಶಾಮೀಲು: ಡಿಸಿಎಂ ಗೋವಿಂದ ಕಾರಜೋಳ

Update: 2020-02-23 15:16 GMT

ರಾಯಚೂರು, ಫೆ.23: ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ಪ್ರಕರಣದಲ್ಲಿ ಕೆಲವು ಸಂಘಟನೆಗಳು ಶಾಮೀಲಾಗಿವೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ರವಿವಾರ ಸಿಂಧನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿನ ಕೆಲವು ಸಂಘಟನೆಗಳು ಮಕ್ಕಳ ಕೈಯಲ್ಲಿ ದೇಶದ್ರೋಹಿ ಕೃತ್ಯಗಳನ್ನು ಮಾಡಿಸುತ್ತಿವೆ. ಇಂತಹ ಸಮಾಜಘಾತಕ ಶಕ್ತಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವುದು ಅಗತ್ಯವಿದೆ ಎಂದರು.

ಅಮೂಲ್ಯ ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಘಟನೆ ಬಗ್ಗೆ ಹೆಚ್ಚು ಮಾತನಾಡಬಾರದು. ದೇಶದ 130 ಕೋಟಿ ಜನರೂ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು. ಅಮೂಲ್ಯ ಹೇಳಿಕೆಯನ್ನ ಅವಳ ತಂದೆ, ತಾಯಿಯೇ ವಿರೋಧಿಸುತ್ತಿದ್ದಾರೆ. ಮಕ್ಕಳ ಮನಸ್ಸುಗಳಿಗೆ ದೇಶಪ್ರೇಮ ತುಂಬುವ ಕೆಲಸವಾಗಬೇಕಿದೆ ಎಂದು ಅವರು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯಡಿ ಜಿಲೆಯಲ್ಲಿ 25 ವಸತಿ, 18 ಸ್ವಂತ ಕಟ್ಟಡ ಇವೆ. 50 ಕೋಟಿ ರೂ.ವೆಚ್ವದಲ್ಲಿ ಎರಡು ಕಟ್ಟಡ ಮಂಜೂರು ಮಾಡಲಾಗಿದೆ. ಉಳಿದ 13 ನಿವೇಶನ ಅಂತಿಮ ಹಂತದಲ್ಲಿವೆ. 6 ಮೊರಾರ್ಜಿ ದೇಸಾಯಿ ಕಟ್ಟಡ ಪ್ರಗತಿಯಲ್ಲಿವೆ. ಈ ವರ್ಷದಲ್ಲಿ 28 ಸಾವಿರ ಕೊಳವೆ ಬಾವಿಗೆ ಮಂಜೂರಾತಿ ನೀಡಲಾಗಿದೆ. 240 ಕೋಟಿ ರೂ.ಅನುದಾನದಲ್ಲಿ ಎಸ್ಸಿ-ಎಸ್ಟಿಗೆ ಭೂಮಿ ಖರೀದಿ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News