ಮಹಿಳಾ ಎಸ್ಸೈ ನೇಣುಬಿಗಿದು ಆತ್ಮಹತ್ಯೆ

Update: 2020-02-23 16:40 GMT

ಬೀದರ್, ಫೆ.24: ಮಹಿಳಾ ಸಬ್ ಇನ್ಸ್‌ಪೆಕ್ಟರ್‌ವೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಬಸವಕಲ್ಯಾಣದಲ್ಲಿ ನಡೆದಿದೆ.

ಮೂಲತಃ ಕಲಬುರಗಿಯ ಆಳಂದ ತಾಲೂಕಿನ ಕಡಗಂಚಿ ನಿವಾಸಿ ರೇಖಾ ಕೋರೆ(28) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳಾ ಎಸ್ಸೈ ಎಂದು ವರದಿಯಾಗಿದೆ.

ಪ್ರೊಬೇಷನರಿ ಎಸ್ಸೈ ಆಗಿದ್ದ ರೇಖಾ ಕೋರೆ, ಎಂಟು ತಿಂಗಳಿನಿಂದ ಬಸವಕಲ್ಯಾಣದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ರವಿವಾರ ಬೆಳಗ್ಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News