ಓ ಮೆಣಸೇ...

Update: 2020-02-23 18:27 GMT

 ನಾನು ಬಿಎಸ್‌ವೈ ಸರಕಾರದ ಬಗ್ಗೆ ಮೃದು ಧೋರಣೆ ಹೊಂದಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
  ಹಿಂದುತ್ವದ ಬಗ್ಗೆ ಮಾತ್ರ ಮೃದು ಧೋರಣೆ ಅಂತೀರಾ?

---------------------

ವಿದ್ಯಾಭ್ಯಾಸ ಮತ್ತು ಶ್ರೀಮಂತಿಕೆಯು ಕುಟುಂಬದಲ್ಲಿ ವಿಚ್ಛೇದನ ಹೆಚ್ಚಾಗಲು ಕಾರಣ - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಅದಕ್ಕೆ ತಮ್ಮ ಸರಕಾರ ಬಡವರಿಗೆ ಶಿಕ್ಷಣ ಮತ್ತು ಹಣ ಎರಡೂ ದೊರಕದಂತೆ ನೋಡಿಕೊಳ್ಳುತ್ತಿರುವುದು.

---------------------

ರಾಜಕಾರಣದಲ್ಲಿ ಒಳ್ಳೆಯವರ ಪ್ರಮಾಣ ಶೇ.25 ಮಾತ್ರ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

 ಆದರೆ ಆ ಶೇ. 25 ಮಂದಿ ಈಗಾಗಲೇ ವೃದ್ಧಾಶ್ರಮ ಸೇರಿದ್ದಾರೆ.

---------------------

 ವಿವಿಗಳು ಚಾಣಕ್ಯನಂತಹ ಗುರುವನ್ನು ಸೃಷ್ಟಿ ಮಾಡಬೇಕು - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರಮಠ
 ಸಾಕ್ಷಾಧಾರಗಳಿದ್ದರೂ ನ್ಯಾಯಾಲಯದ ಕುಣಿಕೆಯಿಂದ ಪಾರಾಗಬಲ್ಲ ಚಾಣಕ್ಯರ ಬಗ್ಗೆ ಹೇಳುತ್ತಿರಬೇಕು.

---------------------

 ವೀರಶೈವರು ಎಂದರೆ ವೈರತ್ವವನ್ನು ಬಿಟ್ಟವರು - ನರೇಂದ್ರಮೋದಿ, ಪ್ರಧಾನಿ
  ಯಡಿಯೂರಪ್ಪರೊಂದಿಗೆ ಮತ್ತೇಕೆ ಒಳಗೊಳಗೇ ಈ ವೈರ?

---------------------

 ಬಡತನ, ಅನಕ್ಷರತೆ, ಬೆಲೆಯೇರಿಕೆ, ನಿರುದ್ಯೋಗ, ಹಿಂಸೆ, ದ್ವೇಷದಿಂದ ನನಗೆ ಆಝಾದಿ ಬೇಕು - ಬಾಬಾರಾಮದೇವ್, ಯೋಗ ಗುರು
ನಿಮ್ಮಿಂದ ಆಝಾದಿ ಸಿಕ್ಕಿದರೆ ಈ ದೇಶದ ಬಡತನ, ಅನಕ್ಷರತೆ, ಬೆಲೆಯೇರಿಕೆ, ನಿರುದ್ಯೋಗಗಳು ನಿಮ್ಮ ಜೊತೆಗೇ ತೊಲಗುವ ಸಾಧ್ಯತೆಗಳಿವೆ.

---------------------

 ಸಚಿವ ಶ್ರೀರಾಮುಲುಗೆ ಬಿಜೆಪಿ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ಸ್ಥಾನಮಾನ ನೀಡಲಿದೆ - ಜನಾರ್ದನ ರೆಡ್ಡಿ, ಮಾಜಿ ಸಚಿವ
ಯಾವ ಜೈಲಿನಲ್ಲಿ ?

---------------------

ಸಮಾಜದಲ್ಲಿ ಹೆಚ್ಚುತ್ತಿರುವ ಹಿಂಸೆ ಹಾಗೂ ಅತೃಪ್ತಿಯಿಂದಾಗಿ ಮೂರನೇ ವಿಶ್ವಯುದ್ಧ ನಡೆದರೂ ಅಚ್ಚರಿಯಿಲ್ಲ - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
 ವಿಶ್ವಕ್ಕೆ ಈ ಬಾರಿ ಹಿಟ್ಲರ್ ಕೊಡುಗೆ ಭಾರತದಿಂದಂತೆ.

---------------------

ಕರ್ನಾಟಕವು ದೂರದೃಷ್ಟಿಯ ಆರ್ಥಿಕ ನಿರ್ವಹಣೆಗೆ ಪ್ರಸಿದ್ಧವಾಗಿದೆ - ವಜುಭಾಯಿ ವಾಲಾ, ರಾಜ್ಯಪಾಲ
 ಅಂದರೆ ದೃಷ್ಟಿ ದೂರವಾಗಿರುವ ಸಮಸ್ಯೆಗಾಗಿ ಇರಬೇಕು.

---------------------

 ಕಾಂಗ್ರೆಸ್ ಯಾವಾಗಲೂ ಪಾಕ್ ಪರ ಇರುವ ಪಕ್ಷ - ಬಸವರಾಜ ಬೊಮ್ಮಾಯಿ, ಸಚಿವ  
ಮೈಸೂರ್ ಪಾಕ್ ಬಗ್ಗೆ ಹೇಳುತ್ತಿರಬೇಕು.

---------------------

ಭಾರತ ರಕ್ಷಣಾತ್ಮಕವಾಗಿ ಮಾತ್ರವಲ್ಲ ಆರ್ಥಿಕವಾಗಿಯೂ ಬಲಿಷ್ಠವಾಗುತ್ತಿದೆ - ಬಿ.ಎಲ್.ಸಂತೋಷ್, ಬಿಜೆಪಿ ರಾ.ಸಂ.ಕಾರ್ಯದರ್ಶಿ
ಆರೆಸ್ಸೆಸ್‌ನ್ನೇ ಭಾರತ ಎಂದು ತಿಳಿದುಕೊಂಡಿರಬೇಕು.

---------------------

ಸಿಎಂ ಯಡಿಯೂರಪ್ಪರ ಮದುವೆಯೇನೋ ಆಗಿದೆ. ಪ್ರಸ್ತ ಮಾಡಲು ಯಾರೂ ಬಿಡುತ್ತಿಲ್ಲ - ಸಿ.ಎಂ.ಇಬ್ರಾಹೀಂ, ಕಾಂಗ್ರೆಸ್ ನಾಯಕ

ನೀವು ಮಂಚದಡಿಯಲ್ಲಿ ಅಡಗಿ ಕೂತರೆ ಅವರು ಪ್ರಸ್ತ ಮಾಡುವುದು ಹೇಗೆ?

---------------------

ಯಡಿಯೂರಪ್ಪ, ದೇವೇಗೌಡ, ಬಂಗಾರಪ್ಪ ರಾಷ್ಟ್ರಮಟ್ಟದಲ್ಲಿ ಪ್ರಭಾವಿಗಳಾಗದೇ ಇರಲು ಅವರಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷಾಜ್ಞಾನದ ಕೊರತೆಯೇ ಕಾರಣ - ಹರತಾಳು ಹಾಲಪ್ಪ, ಶಾಸಕ  
ಸಾಮಾನ್ಯ ಜ್ಞಾನದ ಕೊರತೆಯೂ ಇತ್ತು.

---------------------

 ಭಾರತ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
70 ಲಕ್ಷ ಜನರ ಭರವಸೆ, ಒಂದು ಲಕ್ಷಕ್ಕೆ ಇಳಿದ ಕಾರಣಕ್ಕಿರಬೇಕು.

---------------------

 ಜಿಎಸ್‌ಟಿ 21ನೇ ಶತಮಾನದ ಅತಿ ದೊಡ್ಡ ಮೂರ್ಖತನ - ಸುಬ್ರಮಣಿಯನ್‌ಸ್ವಾಮಿ, ಬಿಜೆಪಿ ಮುಖಂಡ
ವಿಶ್ವ ಮೂರ್ಖರ ಗುರುವಾಗುವುದಕ್ಕೆ ಭಾರತ ಹೊರಟಿದೆಯಂತೆ.

---------------------

 ಪತ್ರಕರ್ತರು ಮತ್ತು ಟಿವಿ ಮಾಧ್ಯಮಗಳು ವೇಶ್ಯಾವಾಟಿಕೆಯ ಕೇಂದ್ರಗಳು - ಆರ್.ಎಸ್.ಭಾರತಿ, ಡಿಎಂಕೆ ನಾಯಕ
  
ರಾಜಕಾರಣಿಗಳೇ ಅದರ ಗಿರಾಕಿಗಳು.

---------------------

 ನಮಗೆ ಯಾವಾಗ ಬಾಲ್ ಹಾಕಬೇಕು ಗೊತ್ತು, ಯಾವಾಗಲೂ ಹಾಕಿದರೆ ಅದು ನೋ ಬಾಲ್ ಆಗುತ್ತದೆ ಎಂದೂ ಗೊತ್ತು - ಆಯನೂರು ಮಂಜುನಾಥ್, ಬಿಜೆಪಿ ನಾಯಕ
ಕ್ರಿಕೆಟ್ ಆಟಕ್ಕೆ ಫುಟ್‌ಬಾಲ್ ಬಳಸಬಾರದು ಎನ್ನುವುದಷ್ಟೇ ಗೊತ್ತಿಲ್ಲ.

---------------------

 ರಾಜ್ಯದಲ್ಲಿ ಇರುವುದು ಹೇಡಿ ಸರಕಾರವಲ್ಲ, ರಾಜಾ ಹುಲಿ ಸರಕಾರ - ಸುನಿಲ್‌ಕುಮಾರ್, ಮುಖ್ಯ ಸಚೇತಕ
  ನಿಮ್ಮ ಹುಲಿ ಬೀಫ್ ತಿನ್ತದ?
---------------------

 ಉತ್ತರ ಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭ ಮೃತಪಟ್ಟವರು ಸಾಯಲು ಬಯಸಿದ್ದವರು - ಯೋಗಿ ಆದಿತ್ಯನಾಥ್, ಉ.ಪ್ರದೇಶ ಮುಖ್ಯಮಂತ್ರಿ
ದೇಶಕ್ಕಾಗಿ ಸಾಯಲು ಬಯಸಿದವರು ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ.

---------------------

ಪಕ್ಷದಲ್ಲಿ ಅಧ್ಯಕ್ಷನೇ ಸುಪ್ರೀಂ, ಅಧ್ಯಕ್ಷ ಹೇಳಿದಂತೆ ಜನಪ್ರತಿನಿಧಿಗಳು ಕೇಳಬೇಕು - ನಳಿನ್‌ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ
ನೀವು ಮಾತ್ರ ಆರೆಸ್ಸೆಸ್‌ನ ಮುಖ್ಯಸ್ಥರು ಹೇಳಿದಂತೆ ಕೇಳಿದರೆ ಸಾಕು.

---------------------

ದೇಶ ರಾಜಕೀಯ ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ - ರಾಜನಾಥ್ ಸಿಂಗ್, ಕೇಂದ್ರ ಸಚಿವ
ಇವಿಎಂ ಕುರಿತಂತೆಯೂ ಇದೇ ಆರೋಪವಿದೆ.

---------------------
 ದುಡ್ಡಿಲ್ಲದೆ ಯಾರೂ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಗೆಲ್ಲಲು ಸಾಧ್ಯವಿಲ್ಲ- ಬಸವರಾಜ ಹೊರಟ್ಟಿ, ಜೆಡಿಎಸ್ ನಾಯಕ
ತಮ್ಮ ಅಪ್ರಾಮಾಣಿಕತೆಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದೀರಿ.

---------------------
 ಮುಖ್ಯಮಂತ್ರಿಯ ಮಗ ಎಂಬ ಒಂದೇ ಒಂದು ಕಾರಣಕ್ಕೆ ನನ್ನ ಬಗ್ಗೆ ಸುಖಾಸುಮ್ಮನೆ ಟೀಕೆ ಮಾಡಲಾಗುತ್ತಿದೆ - ಬಿ.ವೈ.ವಿಜಯೇಂದ್ರ, ಸಂಸದ
  ಮುಖ್ಯಮಂತ್ರಿಯ ಮಗ ಎನ್ನುವುದು ಸಣ್ಣ ಅಪರಾಧವೇ?
---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...