ರವಿ ಪೂಜಾರಿಯ ಬೆದರಿಕೆ ಕರೆ ಬಗ್ಗೆ ಶಾಸಕ ತನ್ವೀರ್ ಸೇಠ್ ಹೇಳಿದ್ದು ಹೀಗೆ...

Update: 2020-02-24 16:17 GMT

ಮೈಸೂರು,ಫೆ.24: ನನ್ನ ಮೇಲೆ ಯಾರು ಯಾಕಾಗಿ ಹಲ್ಲೆ ಮಾಡಿದ್ದಾರೆ ಎಂದು ಗೊತ್ತಿಲ್ಲ. ಸದ್ಯ ಪ್ರಕರಣದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.

ಹೆಚ್ಚಿನ ಚಿಕಿತ್ಸೆಗಾಗಿ ದುಬೈಗೆ ತೆರಳಿದ್ದ ಅವರು ಸೋಮವಾರ ಮೈಸೂರಿಗೆ ಆಗಮಿಸಿದರು. ಅವರನ್ನು ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಂಡರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಫ್‍ಐ, ಎಸ್‍ಡಿಪಿಐ ನಿಷೇಧ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನನ್ನ ಮೇಲೆ ಯಾರು, ಯಾಕೆ ಹಲ್ಲೆ ಮಾಡಿದ್ದಾರೆಂದು ಗೊತ್ತಿಲ್ಲ. ತನಿಖೆ ನಡೆಯುತ್ತಿದೆ. ನಂತರ ಇದರ ಬಗ್ಗೆ ತಿಳಿಯಲಿದೆ ಎಂದು ಹೇಳಿದರು.

ನನಗೆ ಹೆಚ್ಚಿನ ಸೆಕ್ಯೂರಿಟಿ ಬೇಕಿಲ್ಲ. ನನ್ನ ಜೊತೆ ನನ್ನ ಕಾರ್ಯಕರ್ತರೇ ಇದ್ದಾರೆ. ಸಾವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಆದರೆ ನನಗೆ ಒಳ್ಳೆಯ ಸಾವು ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ರವಿ ಪೂಜಾರಿ ವಿಚಾರದಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್, ನನಗೆ ಮತ್ತು ಸಾ.ರಾ. ಮಹೇಶ್ ಗೆ ಮಾತ್ರ ಅಲ್ಲ ಬೆದರಿಕೆ ಇದ್ದದ್ದು. ಇನ್ನೂ ಸಾಕಷ್ಟು ಜನ ಶಾಸಕರಿಗೆ ಬೆದರಿಕೆ ಇತ್ತು. ನಾನು, ಸಾ.ರಾ.ಮಹೇಶ್ ಮಾತ್ರ ದೂರನ್ನು ಕೊಟ್ಟಿದ್ದೆವು. ತನಿಖೆ ನಂತರ ಯಾವೆಲ್ಲ ಶಾಸಕರುಗಳಿಗೆ ಬೆದರಿಕೆ ಇತ್ತು ಎಂಬುದು ಬಯಲಾಗುತ್ತೆ. ಸದ್ಯ ಆತನನ್ನು ಬಂಧಿಸಿ ಕರೆತಂದಿದ್ದಾರೆ. ಇನ್ನು ಮೇಲೆ ಎಲ್ಲಾ ವಿಚಾರಗಳು ಬೆಳಕಿಗೆ ಬರಲಿದೆ. ನನಗೆ ಬೆದರಿಕೆ ಹಾಕಿದ್ದ ಬಗ್ಗೆ ಅಂದು ದೂರು ನೀಡಿದ್ದೆ. ಆದರೆ ಹೆಚ್ಚಾಗಿ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ಎಂದರು.

ನಾನು ಈಗ ಆರೋಗ್ಯವಾಗಿದ್ದೇನೆ. ಧ್ವನಿ ಪೆಟ್ಟಿಗೆ ಮಾತ್ರ ಹಂತಹಂತವಾಗಿ ಸರಿಯಾಗಲಿದೆ. ಧ್ವನಿ ಸರಿಯಾಗಲು ಥೆರಪಿ ಟ್ರೀಟ್‍ಮೆಂಟ್ ನಡೆಯುತ್ತಿದೆ. ಅದನ್ನು ಹೊರತುಪಡಿಸಿ ನಾನು ಫುಲ್ ಆರಾಮವಾಗಿದ್ದೇನೆ. ಮೊದಲಿಗೆ ಹೊಲಿಸಿದರೆ ಇದೀಗ ಫೈನ್ ಮತ್ತು ಧ್ವನಿ ಸುಧಾರಿಸಿದ್ದೇನೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News