ಶಿಕಾರಿಪುರದಲ್ಲಿ ಭೀಕರ ರಸ್ತೆ ಅಪಘಾತ : ಮೂವರು ಮಹಿಳೆಯರು ಮೃತ್ಯು
Update: 2020-02-25 13:40 IST
ಶಿವಮೊಗ್ಗ : ಶಿಕಾರಿಪುರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಶಿಕಾರಿಪುರದ ಜಯನಗರ ನಿವಾಸಿಗಳಾದ ಚಂದ್ರಕಲಾ (40), ಲಕ್ಷ್ಮೀ (40) ಹಾಗೂ ರೇಖಾ (45) ಮೃತರು ಎಂದು ಗುರುತಿಸಲಾಗಿದೆ.
ಶಿಕಾರಿಪುರದ ಕೊಪ್ಪ ಕೆರೆಗೆ ಪೂಜೆ ಸಲ್ಲಿಸಲು ಟಾಟಾ ಏಸ್ ನಲ್ಲಿ ತೆರಳುತ್ತಿದ್ದಾಗ ಕುಮದ್ವತಿ ಸೇತುವೆ ಬಳಿ ಹಿಂದಿನಿಂದ ಬಂದ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ನಲ್ಲಿದ್ದ ಚಂದ್ರಕಲಾ, ಲಕ್ಷ್ಮೀ ಹಾಗೂ ರೇಖಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.