ಅಧಿವೇಶನದಲ್ಲಿ ಬಿಎಸ್‌ವೈ ಸರಕಾರದ ಬಗ್ಗೆ ಚರ್ಚಿಸಲು ವಿಷಯವೇ ಇಲ್ಲ: ಕುಮಾರಸ್ವಾಮಿ

Update: 2020-02-25 16:31 GMT

ಬೆಂಗಳೂರು, ಫೆ.25: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಕುರಿತು ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡಲು ಯಾವ ವಿಷಯವೂ ಇಲ್ಲ, ಅಭಿವೃದ್ಧಿ ಕಾರ್ಯಗಳೂ ಆಗಿಲ್ಲ ಎಂದು ಮಾಜಿ ಮುಖ್ಯಮಂತಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಬಿಜೆಪಿ ಸರಕಾರದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚಿಸುವ ಅಗತ್ಯವಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪರವರ ಮುಂದಿನ 6 ತಿಂಗಳ ಆಡಳಿತ ನೋಡಿ ಜನರೇ ಬೀದಿಗೆ ಇಳಿದು, ಹೋರಾಟ ಮಾಡಲಿದ್ದಾರೆಂದು ತಿಳಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನದಿಂದ ದೇಶದಲ್ಲಿ ಮಹತ್ತರ ಬದಲಾವಣೆಯಾಗುತ್ತದೆ ಎಂಬ ಯಾವುದೇ ನಿರೀಕ್ಷೆ ನನಗಿಲ್ಲ. ನರೇಂದ್ರ ಮೋದಿ ಅಮೆರಿಕಾಗೆ ಹೋಗಿ ಟ್ರಂಪ್ ಹೊಗಳಿ ಬಂದರು. ಟ್ರಂಪ್ ಇಲ್ಲಿಗೆ ಬಂದು ಮೋದಿಯನ್ನು ಹೊಗಳಿ ಭಾಷಣ ಮಾಡಿದ್ದಾರಷ್ಟೆ ಎಂದು ಅವರು ತಿಳಿಸಿದರು.

ಬೇರೆ ಬೇರೆ ದೇಶಗಳೊಂದಿಗೆ ವಾಣಿಜ್ಯ-ವ್ಯವಹಾರಕ್ಕೆ ಸಂಬಂಧಿಸಿದ ಒಪ್ಪಂದಗಳು ಸಹಜ. ಇದನ್ನು ತಪ್ಪು ಎಂದು ಹೇಳುವುದಿಲ್ಲ. ಆದರೆ, ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡುವಂತಹ ಕೆಲಸವಾಗಬಾರದು. ಈ ಕುರಿತು ಎಚ್ಚರಿಕೆ ವಹಿಸಬೇಕೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News