ಎಸ್.ವೈ.ಎಸ್, ಎಸ್ಸೆಸ್ಸೆಫ್ ವಗ್ಗ ಶಾಖೆ ವತಿಯಿಂದ ಸಾಂತ್ವನ ಸೇವೆ

Update: 2020-02-25 18:25 GMT

ಬಂಟ್ವಾಳ, ಫೆ.25: ಸಕ್ಕರೆ ಕಾಯಿಲೆ ಇರುವ ಕಾರಣದಿಂದ ತನ್ನ ಎರಡೂ ಕಾಲನ್ನೂ ಕಳೆದುಕೊಂಡಿರುವ ಹಾಗೂ ಕಿಡ್ನಿ, ಕಣ್ಣು ದೃಷ್ಟಿಗಳನ್ನು ಕಳೆದುಕೊಂಡು ಯಾತನಾಮಯ ಜೀವನ ನಡೆಸುತ್ತಿರುವ ತಾಲೂಕಿನ ಕಾವಳಪಡೂರು ಗ್ರಾಮದ ಪಚ್ಚಾಜೆ ನಿವಾಸಿ ರಮೇಶ್ ಪೂಜಾರಿ ಅವರಿಗೆ ಎಸ್ಸೆಸ್ಸೆಫ್ ಮತ್ತು ಎಸ್.ವೈ.ಎಸ್ ವಗ್ಗ ಶಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ತಾಜುಲ್ ಉಲಮಾ ರಿಲೀಫ್ ಸೆಲ್ ರೇಶನ್ ಕಿಟ್ (ಸಾಂತ್ವನ) ಹಾಗೂ ನಗದನ್ನು ಅವರ ನಿವಾಸದಲ್ಲಿ ಹಸ್ತಾಂತರಿಸಲಾಯಿತು. 

ಈ ಸಂದರ್ಭದಲ್ಲಿ ಕಾವಳಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಪಂಚಾಯತ್ ಸದಸ್ಯರಾದ ಯೂಸುಫ್ ಬಾಂಬಿಲ, ಸ್ಥಳೀಯರಾದ ಧನಂಜಯ್ ಕುಮಾರ್ ಪಚ್ಚಾಜೆ, ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಶೀದ್ ವಗ್ಗ, ರಿಲೀಫ್ ಚೆಯರ್ಮ್ಯಾನ್ ಮುಹಮ್ಮದ್ ಇಕ್ಬಾಲ್ ವಗ್ಗ, ಎಸ್ಸೆಸ್ಸೆಫ್ ವಗ್ಗ ಶಾಖಾಧ್ಯಕ್ಷ ಮುಹಮ್ಮದ್ ಹಾರಿಸ್, ಕೋಶಾದಿಕಾರಿ ಮುಹಮ್ಮದ್ ಇಕ್ಬಾಲ್, ಕಾರ್ಯದರ್ಶಿ ಮನ್ಸೂರ್ ಅಹ್ಮದ್, ಎಸ್.ವೈ.ಎಸ್ ಅಧ್ಯಕ್ಷ ಕರೀಂ ಉಸ್ತಾದ್ ಹಾಗೂ ಸಂಘಟನೆಯ ಇತರ ಸದಸ್ಯರು ಉಪಸ್ಥಿತರಿದ್ದರು.

ಅಭಿನಂದನೆ

ರಮೇಶ್ ಪೂಜಾರಿ ಅವರಿಗೆ ನೆರವಾದ ತಾಜುಲ್ ಉಲಮಾ ರಿಲೀಫ್ ಸೆಲ್ ಇದರ ಕಾರ್ಯವನ್ನು ಕಾವಳಪಡೂರು ಗ್ರಾಮ ಪಂಚಾಯತ್ ಶ್ಲಾಘಿಸಿದ್ದು, ಈ ರೀತಿಯ ಸೇವೆಯನ್ನು ಮುಂದುವರೆಸಬೇಕು ಎಂದು ಅಭಿನಂದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News