ಮೈಸೂರು: ಪೇಪರ್ ಕಾರ್ಖಾನೆಯೊಂದಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ
Update: 2020-02-29 20:39 IST
ಮೈಸೂರು: ನಂಜನಗೂಡಿನ ಪೇಪರ್ ಕಾರ್ಖಾನೆಯೊಂದಕ್ಕೆ ಹುಸಿ ಬಾಂಬ್ ಬೆದರಿಕೆ ಕರೆಯೊಂದು ಬಂದು ಕೆಲ ಕಾಲ ಅತಂಕ ಸೃಷ್ಟಿಮಾಡಿದ ಘಟನೆ ನಡೆಯಿತು.
ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರಯವ ಶ್ರೀರಾಮ ಪೇಪರ್ ಕಾರ್ಖಾನೆಗೆ ಅನಾಮದೇಯ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಫ್ಯಾಕ್ಟರಿಯಲ್ಲಿ ಬಾಂಬ್ ಇರುವುದಾಗಿ ತಿಳಿಸಿದ್ದಾನೆ. ಇದರಿಂದ ಆತಂಕ್ಕಕ್ಕೊಳಗಾದ ನೌಕರರು ಫ್ಯಾಕ್ಟರಿಯಿಂದ ಹೊರಹೋಗಿದ್ದಾರೆ.
ವಿಷಯ ತಿಳಿಯುತಿದ್ದಂತೆ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ತಪಾಸಣೆ ನಡೆಸಿದೆ. ಯಾವುದೇ ಬಾಂಬ್ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ದೂರವಾಣಿ ಮಾಡಿದ ವ್ಯಕ್ತಿಯ ಫೋನ್ ಸ್ವಿಚ್ ಆಫ್ ಆಗಿದ್ದು ಪೊಲೀಸರು ತನಿಖೆ ನಡೆಸುತಿದ್ದಾರೆ.