×
Ad

ಸರಕಾರೇತರ ಸಂಸ್ಥೆಗಳ ಸಾಮಾಜಿಕ ಕಾರ್ಯಗಳು ಶ್ಲಾಘನೀಯ: ಮಹದೇವಮ್ಮ

Update: 2020-02-29 20:58 IST

ಹನೂರು: ಸರ್ಕಾರೇತರ ಸಂಸ್ಥೆಗಳು ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಕುರಟ್ಟಿ ಹೋಸೂರು ಗ್ರಾಮ ಪಂಚಾಯತಿ ಅದ್ಯಕ್ಷೆ ಮಹದೇವಮ್ಮ ಹೇಳಿದರು.

ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಡಿಜಿಟಲ್ ಎಂಪವರ್ ಮೆಂಟ್ ಪೌಂಡೇಶನ್ ದಿಲ್ಲಿ ಹಾಗು ಆರೋಗ್ಯ ಇಲಾಖೆ, ಕೊಳ್ಳೇಗಾಲ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನ್ನಾಡುತ್ತಾ, ಈ ಭಾಗದ ಹಳ್ಳಿಗಳು ಭಾಗಶಃ ಅರಣ್ಯಗಳಿಂದ ಕೂಡಿದ್ದು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅದರಲ್ಲೂ ಆರೋಗ್ಯ ಸಮಸ್ಯೆ ತುಂಬಾ ಇದೆ ಎಂದರು. ಡಿಜಿಟಲ್ ಎಂಪವರ್ ಮೆಂಟ್ ಪೌಂಡೇಶನ್, ದಿಲ್ಲಿ ಹಾಗು ಆರೋಗ್ಯ ಇಲಾಖೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಡಿಜಿಟಲ್ ಎಂಪವರ್ ಮೆಂಟ್ ಪೌಂಡೇಶನ್ ಸ್ಮಾರ್ಟ್ಪುರ್ ಯೋಜನೆಯ ಕಾರ್ಯಕ್ರಮಾಧಿಕಾರಿ ಕುಮಾರ ದೊರೆ ಮಾತನ್ನಾಡುತ್ತಾ, ಹನೂರು ತಾಲ್ಲೂಕು ಬಹಳ ವಿಸ್ತಾರ ಹೊಂದಿದ್ದು, ಮೂಲಭೂತ ಸೌಕರ್ಯ ಒದಗಿಸುವುದು ಸವಾಲೇ ಸರಿ. ತಾಲ್ಲೂಕಿನಲ್ಲಿ ಹಲವಾರು ಸರ್ಕಾರೇತರ ಸಂಸ್ಥೆಗಳು ಉತ್ತಮ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದು ನಮ್ಮ ಸಂಸ್ಥೆಯು ಆರೋಗ್ಯ, ಶಿಕ್ಷಣ, ಜೀವನೋಪಾಯ, ಆಡಳಿತ, ಮನರಂಜನೆ, ಹಣಕಾಸು ವಲಯಗಳ ಅಭಿವೃದ್ದಿಗೆ ಡಿಜಿಟಲ್ ಸ್ಪರ್ಶ ನೀಡುವುದರ ಮುಖಾಂತರ ಅಭಿವೃದ್ದಿ ಕೆಲಸ ಮಾಡಲಾಗುವುದು ಮತ್ತು ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. 

ಕುರಟ್ಟಿ ಹೊಸೂರು, ಭದ್ರಯ್ಯನ ಹಳ್ಳಿ, ಶೆಟ್ಟಳ್ಳಿ, ಚೆನ್ನೂರು, ದಂಟಳ್ಳಿ ಗ್ರಾಮಗಳಿದ ಬಂದಿದ್ದ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಉಚಿತವಾಗಿ ಔಷಧಿ ವಿತರಣೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಡಾ.ನವೀನ್, ಡಾ.ರೂಪ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಡಿಇಎಫ್ ಸಂಸ್ಥೆಯ ಸಿಬ್ಬಂಧಿಗಳಾದ ಮುನಿಸ್ವಾಮಿ, ಮಾಧುರಿ, ಅರ್ಜುನ್, ಭಾಗ್ಯ, ಪಿಡಿಓ ಗೋವಿಂದಪ್ಪ, ಕಂಪ್ಯೂಟರ್ ಆಪರೇಟರ್ ಪುಟ್ಟಮಾದಶೇಟ್ಟಿ ಹಾಗು ಗ್ರಾಮದ ಮುಖಂಡರಾದ ಶ್ರೀರಂಗಶೆಟ್ಟಿ ಮತ್ತು ಜನರು ಭಾಗಿಯಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News