ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಪೀಳಿಗೆಗಿದೆ: ಸಮ್ಮೇಳನಾಧ್ತಕ್ಷ ಟಿ.ಎಸ್.ರಾಜಪ್ಪ

Update: 2020-02-29 18:23 GMT

ಮೈಸೂರು: ಸಾಹಿತ್ಯಾಭಿಮಾನಿಗಳ ಅನುಪಸ್ಥಿತಿಯಲ್ಲಿ 17 ನೇ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆಯಿತು.

ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀಕಂಠೇಶ್ವರ ಕಲಾಮಂದಿರದಲ್ಲಿ ಸಮ್ಮೇಳಾನಾಧ್ಯಕ್ಷ ಟಿ.ಎಸ್.ರಾಜಪ್ಪ ಅವರ ಸಮ್ಮುಖದಲ್ಲಿ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಸಮ್ಮೇಳಾಧ್ಯಕ್ಷ ರಾಜಪ್ಪ, ಕನ್ನಡ ನಾಡು ನುಡಿಗೆ ರಾಜ್ಯದ ಅನೇಕ ಜನರು ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ, ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಪೀಳಿಗೆಗೆ ಇದೆ ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಪ್ರಮುಖವಾಗಿ ರೈತರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಶೌಚಾಲಯಗಳ ಕೊರತೆ, ಶಾಲೆಗೆ ಸರಿಯಾದ ಕಟ್ಟಡಗಳಿಲ್ಲದಿರುವುದು, ಯುವಕರಿಗೆ ಕೆಲಸ ಸಿಗದೇ ಇರುವುದು. ಆಂಗ್ಲ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚುತ್ತಿರುವುದು. ಬೇರೆ ಬೇರೆ ಉದ್ಯೋಗಿಗಳು ಪರಭಾಷೆಯವರು, ಅವರೊಂದಿಗೆ ವ್ಯವಹಾರ ಮಾಡಲಾಗದೆ ತೊಂದರೆ ಅನುಭವಿಸುತ್ತಿರುವ ಜನಸಾಮಾನ್ಯರು. ಇವುಗಳನ್ನೆಲ್ಲಾ ಹಂತ ಹಂತವಾಗಿ ನಿವಾರಿಸಬೇಕಿದೆ ಎಂದು ಹೇಳಿದರು.

ನಾನು ನಂಜನಗೂಡು ತಾಲ್ಲೂಕಿನಲ್ಲಿ ಹುಟ್ಟಿ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇನೆ. ನನಗೆ ಜಾನಪದಕ್ಕೆ ಸ್ಪೂರ್ತಿ ನಮ್ಮ ಮನೆಗೆ ಬರಯತಿದ್ದ ಇಬ್ಬರು ದಲಿತ ಹೆಣ್ಣುಮಕ್ಕಳು. ಅವರು ಹಾಡುತಿದ್ದ ಜಾನಪದ ಗೀತೆಗಳು ನನ್ನನ್ನು ಸೆಳೆದವು ಎಂದರು.

ನಂಜನಗೂಡು ತಾಲ್ಲೂಕಿ ಅನೇಕ ಮಹಾನೀರು ಕನ್ನಡ ನಾಡು ನುಡಿಗೆ ಅಪಾರ ಸೇವೆ ಸಲ್ಲಿಸುದ್ದಾರೆ ಅವರಲ್ಲಿ ದೇವನೂರ ಮಹಾದೇವ, ಮುಳ್ಳೂರು ನಾಗರಾಜು, ಕರ್ ದೇವನೂರು, ವಸಂತಮ್ಮ, ಶ್ರೀಕಂಠವಶಾಸ್ತ್ರಿ, ತಿರುಮಲಾಂಬ, ಜಿ.ವಿ.ಅಯ್ಯರ್, ಸೇರಿದಂತೆ ಅನೇಕರ ಸೇವೆ ಅನನ್ಯ ಎಂದು ಬಣ್ಞಿಸಿದರು.

ಸಮ್ನೇಳನದ ಅಧ್ಯಕ್ಷತೆಯನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ.ಶ್ರೀನಿಸಪ್ರಸಾದ್ ವಹಿಸಿದ್ದರು. ಶಾಸಕ ಹರ್ಷ ವರ್ಧನ್, ನಿಕಟಪೂರ್ವ ಅಧ್ಯಕ್ಷ ಇಂಧೂದರ ಹೊನ್ನಾಪುರ, ತಾ.ಪಂ.ಅಧ್ಯಕ್ಷ ಬಿ.ಎಂ.ಮಹದೇವಪ್ಪ, ಉಪಾಧ್ಯಕ್ಷ ಗೋವಿಂದರಾಜನ್, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಜಿ.ಪಂ ಸದಸ್ಯರುಗಳಾದ ಮಂಗಳಾ ಸೋಮಶೇಖರ್, ಲೀಲಾವತಿ ಸಿದ್ದವೀರಪ್ಪ, ಎಚ್.ಎಸ್.ದಯಾನಂದಮೂರ್ತಿ, ತಾ.ಪಂ.ಸದಸ್ಯ ಬದನವಾಳು ರಾಮು, ನಂಜನಗೂಡು ತಾಲ್ಲೂಕು ಕಸಾಪ ಅಧ್ಯಕ್ಷ ಪಿ.ಮಹೇಶ್ ಅತ್ತಿಖಾನೆ, ತಹಶೀಲ್ದಾರ್ ಮಹೇಶ್ ಕುಮಾರ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಶ್ರೀಕಂಠರಾಜೇಅರಸ್, ನಗರಸಭೆ ಆಯುಕ್ತ ಕರಿಬಸವಯ್ಯ, ಶ್ರೀ ಶ್ರೀಕಂಠೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಸ್ವಾಮಿ, ಎಇಇ ರಾಜಶೇಖರ್, ಡಿವೈಎಸ್ಪಿ ಪ್ರಭಾಕರರಾವ್ ಶಿಂಧೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News