×
Ad

ದೊರೆಸ್ವಾಮಿ ವಿರುದ್ಧದ ಹೇಳಿಕೆ: ಯತ್ನಾಳ್ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದ ಡಿಸಿಎಂ ಅಶ್ವಥ್

Update: 2020-03-01 17:23 IST

ಬೆಂಗಳೂರು, ಮಾ.1: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಾವುದೇ ಕಾನೂನು ಬಾಹಿರ ಹೇಳಿಕೆ ನೀಡಿಲ್ಲ. ಹೀಗಾಗಿ, ಅವರ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ ನಾರಾಯಣ ಹೇಳಿದರು.

ರವಿವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಟೈಪ್- 1 ಡಯಾಬಿಟಿಸ್ ಫೌಂಡೇಶನ್ ಆಫ್ ಇಂಡಿಯಾ ಸಂಸ್ಥೆಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ದೊರೆಸ್ವಾಮಿ ಕುರಿತು ಸಚಿವ ಸುರೇಶ್‌ ಕುಮಾರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಗಳು ಸರಿಯಾಗಿವೆ. ಅಲ್ಲದೆ, ಯತ್ನಾಳ್ ಅವರಿಗೂ ವಾಕ್ ಸ್ವಾತಂತ್ರವಿದ್ದು, ಅವರು ಸಹ ಸಂವಿಧಾನದಡಿ, ಕಾನೂನು ರೀತಿಯ ಮಾತನಾಡಿದ್ದಾರೆ ಎಂದು ತಿಳಿಸಿದರು.

ಯತ್ನಾಳ್ ಹೇಳಿಕೆಯನ್ನಿಟ್ಟುಕೊಂಡು ಸದನ ನಡೆಯಲು ಬಿಡುವುದಿಲ್ಲ ಎನ್ನುವುದು ಸರಿಯಲ್ಲ ಎಂದ ಅವರು, ಸದನ 60 ದಿನ ನಡೆಯಲೇ ಬೇಕು. ಅಲ್ಲಿ ಸಂವಿಧಾನ ಕುರಿತ ವಿಚಾರ ಮಂಡನೆಗೆ ಅವಕಾಶ ಇರುತ್ತದೆ, ಹಾಗಾಗಿ ವಿರೋಧ ಬೇಡ. ಎಲ್ಲವೂ ಸದನದ ಮೂಲಕ ಚರ್ಚೆ ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಸುಭದ್ರ ಸರಕಾರ ಆಡಳಿತದಲ್ಲಿದೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೇ ನಮಗೆ ಸಹಕಾರ ನೀಡಿವೆ. ಹಾಗಾಗಿ, ಯಾರಾದರೂ ಬಿಜೆಪಿ ಸೇರ್ಪಡೆ ಆದರೆ, ಅದು ಅವರ ವೈಯುಕ್ತಿಕ. ಜೊತೆಗೆ ನಮ್ಮ ನಾಯಕರ ನಾಯಕತ್ವ ಗುಣ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News