ದೊರೆಸ್ವಾಮಿ ವಿಷಯವೂ ಬೇಡ, ಯತ್ನಾಳ್ ವಿಷಯವೂ ಬೇಡ: ಶಾಮನೂರು ಶಿವಶಂಕರಪ್ಪ

Update: 2020-03-01 17:44 GMT

ದಾವಣಗೆರೆ, ಮಾ.1: ರಾಜಕೀಯ ಅಂದ ಮೇಲೆ ಅವರು, ಇವರಿಗೆ, ಇವರು ಅವರಿಗೆ ಬೈಯುವುದು ಸಾಮಾನ್ಯ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.  

ನಗರದ ಹಳೇ ಕುಂದುವಾಡದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಯತ್ನಾಳ್ ಹೇಳಿಕೆ ಹಿನ್ನಲೆ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಅಂದ ಮೇಲೆ ಒಬ್ಬರಿಗೊಬ್ಬರು ಟೀಕೆ ಮಾಡುವುದು ಕಾಮನ್. ದೊರೆಸ್ವಾಮಿಯವರ ವಿಷಯವೂ ಬೇಡ, ಯತ್ನಾಳ್ ವಿಷಯವೂ ಬೇಡ ಎಂದು ಪ್ರತಿಕ್ರಿಯೆಗೆ ನಿರಾಕರಿಸಿದರು.  

ಬೇಸಿಗೆ ನೀರನ ಅಭಾವ ತಪ್ಪಿಸಲು ಚೆಕ್ ಡ್ಯಾಂ 
ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಅಭಾವ ಆಗದಂತೆ ಮುಂಜಾಗೃತ ಕ್ರಮವಾಗಿ ತುಂಗಾಭದ್ರಾ ನದಿಗೆ ಅಡ್ಡಲಾಗಿ ಅಂದಾಜು 80 ಕೋಟಿ ರೂ. ಮೊತ್ತದಲ್ಲಿ  ರಾಜನಹಳ್ಳಿ ಹತ್ತಿರ ಚೆಕ್ ಡ್ಯಾಂ ಮಾದರಿಯಲ್ಲಿ ಬ್ಯಾರೇಜ್ ನಿರ್ಮಾಣಕ್ಕೆ ಪೂಜೆ ಸಲ್ಲಿಸಿದೆವು ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಸ್ಮಾರ್ಟ್ ಸಿಟಿ ಹಾಗೂ ಜಲಸಿರಿ ಯೋಜನೆಯಡಿ 24 ಗಂಟೆ ನೀರು ಒದಗಿಸುವ ಉದ್ದೇಶದಿಂದ ಈ ಬ್ಯಾರೇಜ್ ನಿರ್ಮಿಸಲು ಯೋಜನೆ ಸಿದ್ದಪಡಿಸಲಾಗಿತ್ತು. ಇಂದು ಕಾಮಗಾರಿ ಶುರುವಾಗಿದ್ದು, 18 ತಿಂಗಳ ಒಳಗೆ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು. 

ಹಳೇ ಕುಂದುವಾಡ ಶ್ರೀ ಕರಿಬಸವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಕಡೇ ದಿನದ ಪ್ರಯುಕ್ತ ಪಳಾರ ಪೂಜೆ, ಮೃತ್ಯುಂಜಯ ಹೋಮ ನಡೆಸಲಾಯಿತು. 
ದೇವಸ್ಥಾನದ ಧರ್ಮದರ್ಶಿ ರಾಜಪ್ಪ ಸ್ವಾಮಿಜಿ ಪಳಾರ ಪೂಜೆ, ಹೋಮ ಹವನ ನಡೆಸಿಕೊಟ್ಟರು, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪೂಜೆಗೆ ಆಗಮಿಸಿ ಆಶೀರ್ವಾದ ಪಡೆದರು. ನಾನು ತುಂಬಾ ದಿನಗಳಿಂದ ಕರಿಬಸವೇಶ್ವರ ದೇವಸ್ಥಾನಕ್ಕೆ ಬರುತ್ತಿದ್ದೇನೆ, ಇಂದು ಪಳಾರ ಪೂಜೆ, ಮೃತ್ಯುಂಜಯ ಹೋಮ ನಡೆಸಲಾಯಿತು. ಕರಿಬಸವೇಶ್ವರ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ತಿಳಿಸಿದರು. 

ಈ ವೇಳೆ ಉದ್ಯಮಿ ಅಥಣಿ ವೀರಣ್ಣ, ಪಾಲಿಕೆ ಮಾಜಿ ಸದಸ್ಯರಾದ ದಿನೇಶ ಕೆ ಶೆಟ್ಟಿ, ತಿಪ್ಪಣ್ಣ, ಮಹೇಶ್ವರಪ್ಪ ಇತರರು ಇದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News