ಹನೂರು: ಜೂಜು ಅಡ್ಡೆ ಮೇಲೆ; 10 ಮಂದಿ ಬಂಧನ

Update: 2020-03-01 17:55 GMT

ಹನೂರು, ಮಾ.1: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಠಾಣೆಯ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ಮಾಡಿ 10 ಮಂದಿಯನ್ನು ಬಂಧಿಸಿದ್ದು, 39 ಸಾವಿರ ರೂಪಾ. ವಶಕ್ಕೆ ಪಡೆದಿದ್ದಾರೆ

ಮಲೆಮಹದೇಶ್ವರ ಬೆಟ್ಟದ ಸಾಲೂರು ಸ್ಮಾರಕ ಭವನ ಸಮೀಪದ ಗಲ್ಲಿಯಲ್ಲಿ ಈ ಘಟನೆ ನೆಡಿದಿದ್ದು, ಇನ್ಸ್ ಪೆಕ್ಟರ್ ಮಹೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ಸಂಬಂಧ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News