ಓ ಮೆಣಸೇ...

Update: 2020-03-01 18:31 GMT

=*ಆಂಗ್ಲ ಭಾಷಾ ವ್ಯಾಮೋಹದಿಂದ ನಮ್ಮ ಸಂಸ್ಕೃತಿ, ಸಂಸ್ಕಾರ, ನಮ್ಮತನ ಮರೆಯಾಗುವ ಅಪಾಯವಿದೆ
- ಶೋಭಾ ಕರಂದ್ಲಾಜೆ, ಸಂಸದೆ.
ವ್ಯಾಮೋಹಕ್ಕಿಂತ ಮೋಹವೇ ಕೆಲವೊಮ್ಮೆ ಹೆಚ್ಚು ಲಾಭದಾಯಕ.

---------------------

 ದೇವಸ್ಥಾನಗಳಲ್ಲಿ ರಾಷ್ಟ್ರ ಮಾತೆಯನ್ನು ಆರಾಧಿಸುವ ಮೂಲಕ ರಾಷ್ಟ್ರ ಜಾಗೃತಿ ಮೂಡಿಸುವ ಕೆಲಸವಾಗಬೇಕು
- ನಳಿನ್ ಕುಮಾರ್ ಕಟೀಲು, ಸಂಸದ.
  ಆದರೆ ದೇವಸ್ಥಾನಗಳ ಒಳಗೆ ದಲಿತ, ಶೂದ್ರರಿಗೆ ಪ್ರವೇಶವಿಲ್ಲವಲ್ಲ?

---------------------

ಯಾವ ಕಾರಣಕ್ಕೂ ಮಾಜಿ ಶಾಸಕ ಕುಮಟಳ್ಳಿಗೆ ಅನ್ಯಾಯವಾಗಲು ಬಿಡುವುದಿಲ್ಲ
- ಬಿ.ಸಿ. ಪಾಟೀಲ್, ಸಚಿವ.
  ರಾಜ್ಯದ ಜನತೆಗೆ ಅನ್ಯಾಯವಾದರೂ ಪರವಾಗಿಲ್ಲ.

---------------------

ಕಾಂಗ್ರೆಸ್‌ಗೆ ಪೂರ್ಣ ಪ್ರಮಾಣದ ಅಧ್ಯಕ್ಷರು ಇಲ್ಲದ ಕಾರಣ ಗೊತ್ತು ಗುರಿ ಇಲ್ಲದೆ ಸಾಗುತ್ತಿದೆ
- ಶಶಿ ತರೂರು, ಸಂಸದ.  
ಗೊತ್ತು ಗುರಿ ಇಲ್ಲದ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನ ವಹಿಸಲು ಎಲ್ಲರಿಗೂ ಭಯ.

---------------------

ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಬಿಡುವುದಿಲ್ಲ

- ಸುರೇಶ್‌ಕುಮಾರ್, ಸಚಿವ.
ಉತ್ತರ ಪತ್ರಿಕೆ ಸೋರಿಕೆಯಾದರೂ ಸಾಕು, ಎನ್ನುವುದು ವಿದ್ಯಾರ್ಥಿಗಳ ಆಶಯ.

---------------------

ಬಹಳಷ್ಟು ಜನ ಮಂತ್ರಿ, ಮಾಜಿ ಮಂತ್ರಿಗಳು ಸಂಭಾವಿತರಂತೆ ನಾಟಕವಾಡುತ್ತಾರೆ

- ಸಿ.ಟಿ. ರವಿ, ಸಚಿವ.
 ಬಹುಶಃ ನಿಮ್ಮಂತೆ.

---------------------
ಗಾಂಧಿಯನ್ನು ಕೊಂದವರಿಗೆ ಗಾಂಧಿ ವಾದವನ್ನು ಕೊಲ್ಲಲು ಸಾಧ್ಯವಿಲ್ಲ

- ರಮೇಶ್ ಕುಮಾರ್, ಮಾಜಿ ಸ್ಪೀಕರ್.
ದಿಲ್ಲಿಯಲ್ಲಿ ನಡೆದದ್ದೇನು?

---------------------

ಪ್ರಧಾನಿ ಮೋದಿ ಚಾಯ್ ವಾಲಾ ಅಲ್ಲ, ಅವರು ಚಾಯ್ ಮಾಡುತ್ತಿರಲಿಲ್ಲ

- ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಂಸದ.
ಚಾಯ್‌ವಾಲಾ ಆಗಿದಿದ್ದರೆ ಚೆನ್ನಾಗಿತ್ತು. ದೇಶ ಮಾರುತ್ತಿರಲಿಲ್ಲ.

---------------------

ಯುದ್ಧದಿಂದ ಬಸವಳಿದಿರುವ ತಾಲಿಬಾನ್ ಈಗ ಶಾಂತಿ ಬಯಸುತ್ತಿದೆ

- ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ.
ಬಹುಶಃ ನಿಮಗೂ ಸುಸ್ತಾದಂತಿದೆ.

---------------------

ಭಾರತದಲ್ಲಿ ಮೋದಿ ಅಧಿಕಾರದಲ್ಲಿರುವವರೆಗೆ ಭಾರತ-ಪಾಕ್ ಸರಣಿ ಸಾಧ್ಯವಿಲ್ಲ

- ಶಾಹಿದ್ ಆಫ್ರಿದಿ, ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ.
ನಿಮಗೆ ಸರಣಿಯ ಚಿಂತೆ, ಭಾರತಕ್ಕೆ ದೇಶದ ಜಿಡಿಪಿಯ ಚಿಂತೆ.

---------------------

ಯಡಿಯೂರಪ್ಪ ಹೋರಾಟಗಾರರು, ಅವರ ಅಂತ್ಯವೂ ಹೋರಾಟದಲ್ಲೇ

- ವಿ. ಸೋಮಣ್ಣ, ಸಚಿವ.
ಅಂದರೆ ಟಿಪ್ಪುಸುಲ್ತಾನ್‌ನಂತೆ ಹೋರಾಡುತ್ತಲೇ ಅಂತ್ಯವಾಗುತ್ತಾರೆ ಎಂಬ ಭವಿಷ್ಯವೆ?

---------------------

ದೊರೆಸ್ವಾಮಿ ನಕಲಿ ಸ್ವಾತಂತ್ರ ಹೋರಾಟಗಾರ

- ಬಸನಗೌಡ ಪಾಟೀಲ ಯತ್ನಾಳ್, ಶಾಸಕ.
ಬ್ರಿಟಿಷರ ವಾರಸುದಾರರಿಗೆ ಹಾಗೆ ಕಾಣುವುದು ಸಹಜ.

---------------------

ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಹಿಸುವುದೂ ಕಷ್ಟ
- ಕೋಟ ಶ್ರೀನಿವಾಸ ಪೂಜಾರಿ, ಸಚಿವ.
ಅಂತೂ ಅವರಿಲ್ಲದ ಬಿಜೆಪಿಯನ್ನು ಊಹಿಸುವುದಕ್ಕೆ ಆರಂಭಿಸಿದ್ದೀರಿ ಎಂದಾಯಿತು.

---------------------

ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ಅವರ ಪರಿಶ್ರಮದಿಂದಾಗಿಯೇ ನಾನಿಂದು ಈ ಸ್ಥಾನದಲ್ಲಿದ್ದೇನೆ

- ಯಡಿಯೂರಪ್ಪ, ಮುಖ್ಯಮಂತ್ರಿ.
ಹೌದು, ಅವರು ಮುಖ್ಯಮಂತ್ರಿ ಸ್ಥಾನ ಕಿತ್ತುಕೊಳ್ಳಲು ತುಂಬಾ ಪರಿಶ್ರಮ ಪಟ್ಟು ವಿಫಲವಾಗಿದ್ದರು.

---------------------

ದೇಶವನ್ನು ರಕ್ಷಿಸಲು ಭಾರತೀಯ ಸಶಸ್ತ್ರ ಪಡೆಗಳು ಗಡಿದಾಟಲು ಹಿಂಜರಿಯುವುದಿಲ್ಲ

- ರಾಜನಾಥ್ ಸಿಂಗ್, ಕೇಂದ್ರ ಸಚಿವ.
ಹಾಗಾದರೆ ಚೀನಾದ ಗಡಿಯನ್ನು ದಾಟಿ ಬಿಡಿ.

---------------------

ದಿಲ್ಲಿಯ ಹಿಂಸಾಚಾರವು ಕೇಂದ್ರ ಗುಪ್ತಚರ ದಳದ ವೈಫಲ್ಯವಾಗಿದೆ

- ರಜನಿಕಾಂತ್, ನಟ.
ಗುಪ್ತಚರ ಇಲಾಖೆಯ ಹೆಣ ಚರಂಡಿಯಲ್ಲಿ ಪತ್ತೆಯಾಗಿದೆ.

---------------------

 ರಾಜಕಾರಣಕ್ಕೆ ಮನುಷ್ಯ ಸಂಬಂಧ ಅಡ್ಡ ಬರಬಾರದು
- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.
ರಾಜಕಾರಣವೆಂದರೆ ಅಡ್ಡಬಂದ ಮನುಷ್ಯ ಸಂಬಂಧಗಳನ್ನು ಒಡೆಯುವುದು.

---------------------

ಲವ್ ಜಿಹಾದ್ ಹೆಸರಿನಲ್ಲಿ ವಿದೇಶಗಳಿಗೆ ಯುವತಿಯರ ಮಾರಾಟ ನಡೆಯುತ್ತಿದೆ

- ಶೋಭಾ ಕರಂದ್ಲಾಜೆ, ಸಂಸದೆ.
ಕೆಲವೊಮ್ಮೆ ರಾಜಕೀಯದ ಹೆಸರಲ್ಲೂ ಇಂತಹ ಮಾರಾಟಗಳು ನಡೆಯುತ್ತಿರುತ್ತವೆ.

---------------------
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ ಎಂಬ ಮಾತಿನಂತೆ ಈಗ ನಾನು ಮತ್ತು ಯಡಿಯೂರಪ್ಪ ಒಂದೇ ಪಕ್ಷದಲ್ಲಿದ್ದೇವೆ

- ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ.
ಒಟ್ಟಿನಲ್ಲಿ ಶತ್ರುದಾಳಿಯಿಂದ ರಕ್ಷಿಸಿಕೊಳ್ಳಲು ಶತ್ರು ಪಾಳಯ ಸೇರುವುದೇ ಪರಿಹಾರ.

---------------------

ಬದ್ಧತೆ, ಪ್ರಾಮಾಣಿಕತೆ ಇದ್ದರೆ ಯಾವ ಎತ್ತರಕ್ಕೂ ಏರಬಹುದು ಎಂಬುದಕ್ಕೆ ಯಡಿಯೂರಪ್ಪ ದೊಡ್ಡ ಉದಾಹರಣೆ

- ಬಿ.ಎಲ್. ಸಂತೋಷ್, ಬಿಜೆಪಿ ರಾ.ಸಂ. ಕಾರ್ಯದರ್ಶಿ.
ಜೊತೆಗೆ ಆರೆಸ್ಸೆಸ್‌ನ್ನು ಎದುರಿಸುವ ಎದೆಗಾರಿಕೆಯೂ ಇರಬೇಕು.

---------------------

ರಾಜಕಾರಣದಲ್ಲಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು ಸಾಮಾನ್ಯ

- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.
ನೀವು ಯಾವ ಪಕ್ಷಕ್ಕೆ ಹೋಗಬೇಕೆಂದಿದ್ದೀರಿ?

---------------------

ಬಿಜೆಪಿಯವರಿಗೆ ಪಾಕ್ ವೈರಸ್ ಹರಡಿದೆ, ಇದು ಕೊರೋನ ವೈರಸ್‌ಗಿಂತಲೂ ಹಾನಿಕಾರಕ

- ಯು.ಟಿ. ಖಾದರ್, ಮಾಜಿ ಸಚಿವ.
ದೇಶಕ್ಕೆ ಕಾಡಿರುವ ಆರೆಸ್ಸೆಸ್ ವೈರಸ್‌ನ ಬಗ್ಗೆಯೂ ಒಂದಿಷ್ಟು ಮಾತನಾಡಿ.

---------------------

 ದೇಶದ ಬಹುತೇಕ ಕಲ್ಯಾಣ ಮಂಟಪಗಳೆಲ್ಲ ಭರ್ತಿಯಾಗಿರುವಾಗ ಅರ್ಥವ್ಯವಸ್ಥೆ ಕುಸಿದಿದೆ ಎಂಬ ಹೇಳಿಕೆಯಲ್ಲಿ ಹುರುಳಿಲ್ಲ

- ಸುರೇಶ್ ಅಂಗಡಿ, ಕೇಂದ್ರ ಸಚಿವ.
ಊಟಕ್ಕಿಲ್ಲದವರೆಲ್ಲ ಕಂಡವರ ಮದುವೆಯ ಕಲ್ಯಾಣಮಂಟವನ್ನು ಹುಡುಕುತ್ತಿದ್ದಾರೆ.

---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...