×
Ad

ಅಡುಗೆ ಅನಿಲ ಸ್ಫೋಟ: ಮನೆ ದಾಖಲಾತಿ, ನಗದು ಸುಟ್ಟು ಭಸ್ಮ

Update: 2020-03-02 22:44 IST

ಮೈಸೂರು,ಮಾ.2: ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಮನೆಯ ದಾಖಲಾತಿ ಸೇರಿದಂತೆ ನಗದು ಹಣ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಗಾಯತ್ರಿಪುರಂ 2ನೇ ಹಂತದ 7ನೇ ಕ್ರಾಸ್ ಕ್ಯಾತಮಾರನಹಳ್ಳಿ ಮನೆಯೊಂದರಲ್ಲಿ ನಡೆದಿದೆ.

ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 30ರ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ.

ಮನೆಯ ಮಹಿಳೆಯೋರ್ವರು ಮಾತನಾಡಿ, ಒಂದು ಖಾಲಿ ಸಿಲಿಂಡರ್ ಮತ್ತು ತುಂಬಿದ ಸಿಲಿಂಡರ್ ಇತ್ತು. ಹೊಸತು ತಂದು ಪಿಟ್ ಮಾಡಿದ್ದೆವು. ಖಾಲಿಯಾಗಿದೆ ಅಂತ ಬೇರೆ ತೆಗೆದುಕೊಂಡು ಬರಲು ಹೇಳಿದರು. ಅದು ಸ್ವಲ್ಪ ವಾಸನೆ ಬರುತ್ತಿತ್ತು. ಬೆಂಕಿ ಹಚ್ಚುವಾಗ ಹೊತ್ತಿ ಉರಿಯಿತು ಎಂದ ಅವರು, ಮೂರು ಮನೆ ಪತ್ರ ಇತ್ತು. ಕಾಂಕ್ರಿಟ್ ಅವರದ್ದು ಕೂಲಿ ಹಣ 30 ಸಾವಿರ ಇತ್ತು. ಅದು ಭಸ್ಮವಾಗಿದೆ. ಆದರೆ ಪ್ರಾಣಾಪಾಯವಾಗಿಲ್ಲ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News