ಬಂಡೀಪುರಕ್ಕೆ ಸೇನಾ ಹೆಲಿಕಾಪ್ಟರ್ ನೀಡಲು ಸರ್ಕಾರ ಒಪ್ಪಿಗೆ

Update: 2020-03-04 12:42 GMT

ಗುಂಡ್ಲುಪೇಟೆ,ಮಾ.4: ಬೇಸಿಗೆ ಪ್ರಾರಂಭವಾಗಿರುವುದರಿಂದ ಮುಂಜಾಗೃತ ಕ್ರಮವಾಗಿ ಬಂಡೀಪುರ ಅರಣ್ಯದಲ್ಲಿ ಸಂಭವಿಸಬಹುದಾದ ಬೆಂಕಿ ಅವಘಡಗಳನ್ನ ತಪ್ಪಿಸಲು ಸೇನಾ ಹೆಲಿಕಾಪ್ಟರ್ ಸೇವೆ ಒದಗಿಸಲು ಸಿದ್ಧವಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಭಾರತೀಯ ವಾಯುಪಡೆ ವಿಭಾಗದ ಮಾರ್ಷೆಲ್ ಟಿ.ಡಿ ಜೋಸೆಫ್ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಬಾಸ್ಕರ್ ಅವರಿಗೆ ಪತ್ರ ಬರೆದಿದ್ದಾರೆ.

ಕಳೆದ ವರ್ಷ ಬೆಂಕಿಯ ಕೆನ್ನಾಲಿಗೆ ಹೊತ್ತಿ ಉರಿದ ಬಂಡೀಪುರ ಅಭಯಾರಣ್ಯದ ನೆರವಿಗೆ ಸೇನಾ ಹೆಲಿಕಾಪ್ಟರ್ ಧಾವಿಸಿದ್ದು, ಹೊತ್ತಿ ಉರಿಯುತ್ತಿದ್ದ ಅರಣ್ಯವನ್ನು  ಸಂರಕ್ಷಣೆ ಮಾಡಿತ್ತು.

ಬಂಡೀಪುರ ಅರಣ್ಯ ಅಧಿಕಾರಿಗಳು ಇತ್ತೀಚೆಗೆ ರಾಜ್ಯದ ಹಿಂದಿನ ಅರಣ್ಯ ಸಚಿವರಾಗಿದ್ದ ಸಿ.ಸಿ.ಪಾಟೀಲ್ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದಾಗ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಟಿ.ಬಾಲಚಂದ್ರ ಸೇನಾ ಹೆಲಿಕಾಪ್ಟರ್ ನೀಡುವಂತೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ ಸಚಿವರು, ಕೂಡಲೇ ಕೇಂದ್ರದ ರಕ್ಷಣಾ ಸಚಿವರ ಜೊತೆ ಮಾತಾನಾಡಿ ಹೆಲಿಕಾಪ್ಟರ್ ಒದಗಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ತಿಳಿಸಿದ್ದರು.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News