ಮೀನು ಹಿಡಿಯಲು ಹೋದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಮೃತ್ಯು
Update: 2020-03-04 18:20 IST
ಕಲಬುರಗಿ, ಮಾ.4: ಜೇವರ್ಗಿ ತಾಲೂಕಿನ ಹಾಲಗಡ್ಲಾ ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ಬಸಣ್ಣ ಶಂಕ್ರಪ್ಪ(25) ನಾಗಣ್ಣ ಶಂಕ್ರಪ್ಪ (18) ಮೃತಪಟ್ಟವರು. ಮೃತರಿಬ್ಬರು ಸಹೋದರರು ಎಂದು ತಿಳಿದುಬಂದಿದ್ದು, ಪ್ರತಿದಿನದಂತೆ ಹಾಲಗಡ್ಲಾ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಇವರು ಇಂದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಜೇವರ್ಗಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.