×
Ad

ದ್ವಿತೀಯ ಪಿಯುಸಿ ಪರೀಕ್ಷೆ: ಕೋಲಾರದಲ್ಲಿ 400 ಮಂದಿ ಗೈರು

Update: 2020-03-04 22:00 IST

ಕೋಲಾರ, ಮಾ.4: ಜಿಲ್ಲೆಯ 26 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಇತಿಹಾಸ, ಭೌತಶಾಸ್ತ್ರ ಹಾಗೂ ಬೇಸಿಕ್ ಮ್ಯಾಥ್ಸ್ ವಿಷಯಗಳ ಪರೀಕ್ಷೆ ಸುಗಮವಾಗಿ ನಡೆದಿದ್ದು, ಒಟ್ಟಾರೆ  400  ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಪಿಯು ಉಪನಿರ್ದೇಶಕಿ ಟಿ.ಎಸ್.ಶ್ರೀಶೈಲಾ ತಿಳಿಸಿದ್ದಾರೆ.

ಇತಿಹಾಸ ವಿಷಯಕ್ಕೆ ಒಟ್ಟು 4,888 ವಿದ್ಯಾರ್ಥಿಗಳು ನೊಂದಾಯಿಸಿದ್ದು, 4,556 ಮಂದಿ ಹಾಜರಾಗಿ ಉಳಿದ 332 ಮಂದಿ ಗೈರಾಗಿದ್ದಾರೆ

ಹಾಗೆಯೇ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಒಟ್ಟು 2,491 ಮಂದಿ ನೊಂದಾಯಿಸಿದ್ದು, ಪರೀಕ್ಷೆಗೆ 2,414 ಮಂದಿ ಹಾಜರಾಗಿದ್ದು, 77 ಮಂದಿ ಗೈರಾಗಿದ್ದಾರೆ.

ಬೇಸಿಕ್ ಗಣಿತ ವಿಷಯಕ್ಕೆ ಕೇವಲ 67 ಮಂದಿ ನೊಂದಾಯಿಸಿದ್ದು, ಪರೀಕ್ಷೆಗೆ 65 ಮಂದಿ ಹಾಜರಾಗಿ ಇಬ್ಬರು ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪರೀಕ್ಷಾ ಕಾರ್ಯಗಳು ಅತ್ಯಂತ ಸುಗಮವಾಗಿ ನಡೆದಿದ್ದು, ಜಿಲ್ಲೆಯ ಯಾವುದೇ ಕೇಂದ್ರದಲ್ಲಿ ಪರೀಕ್ಷೆ ಅವ್ಯವಹಾರಗಳು ವರದಿಯಾಗಿಲ್ಲ.

ಪರೀಕ್ಷಾ ಕೇಂದ್ರಗಳ ಮುಂದೆ ಕಾದಿದ್ದ ಪೋಷಕರು

ಪರೀಕ್ಷೆ ಆರಂಭಕ್ಕೂ ಮುನ್ನಾ ಮಕ್ಕಳೊಂದಿಗೆ ನೂರಾರು ಮಂದಿ ಪೋಷಕರು ಪರೀಕ್ಷಾ ಕೇಂದ್ರದ ಮುಂದೆ ಜಮಾಯಿಸಿದ್ದುದು ಕಂಡು ಬಂತು.

ತಮ್ಮ ಮಕ್ಕಳ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿ ಆಸನ ವ್ಯವಸ್ಥೆ ಮತ್ತಿತರ ಅಂಶಗಳ ಕುರಿತು ಸೂಚನಾ ಫಲಕದಲ್ಲಿ ಹುಡುಕುವ ಕೆಲಸದಲ್ಲಿ ಪೋಷಕರು,ವಿದ್ಯಾರ್ಥಿಗಳು ನಿರತರಾಗಿದ್ದುದು ಕಂಡು ಬಂತು.

ಎಲ್ಲಾ ಕೇಂದ್ರಗಳ ಬಳಿಯೂ ಬಿಗಿಪೊಲೀಸ್ ಬಂದೋಬಸ್ತ್ ಮಾಡಿದ್ದು, ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಗುರುತಿನ ಚೀಟಿ ಹೊಂದಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಯಾರನ್ನು ಒಳಗೆ ಬಿಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News