×
Ad

ಖಾಸಗಿ ಬಸ್ ಢಿಕ್ಕಿಯಾಗಿ ಗುಂಡಿಗೆ ಬಿದ್ದ ಓಮ್ನಿ: ಅಜ್ಜಿ- ಮೊಮ್ಮಗಳು ಮೃತ್ಯು

Update: 2020-03-05 17:25 IST

ವಿಜಯಪುರ, ಮಾ.5: ಹಿಂಬದಿಯಿಂದ ಖಾಸಗಿ ಬಸ್ ಢಿಕ್ಕಿಯಾದ ಪರಿಣಾಮ ಓಮ್ನಿ ವಾಹನ ಗುಂಡಿಗೆ ಉರುಳಿ‌ ಬಿದ್ದು ಅಜ್ಜಿ ಮತ್ತು ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಯುಕೆಪಿ ವೃತ್ತದ ಅಂಡರ್ ಪಾಸ್ ನಲ್ಲಿ ಗುರುವಾರ ನಡೆದಿದೆ. 

ಚಾಂದಬೀ ಅಂಗಡಿ (45) ಮಹೀರಾಬಾನು‌ ದೊಡಮನಿ (3) ಮೃತ ಅಜ್ಜಿ- ಮೊಮ್ಮಗಳು. ಕೊಲ್ಹಾರ ಪಟ್ಟಣದ ರಸ್ತೆಯ ಮಧ್ಯದಲ್ಲೇ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು, ಅವಘಡಕ್ಕೆ ಖಾಸಗಿ ಬಸ್ ಡೈವರ್ ನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.

ಓಮ್ನಿ ವಾಹನದಲ್ಲಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಬಾಗಲಕೋಟೆ ‌ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ, ಖಾಸಗಿ ಬಸ್‌ ಅನ್ನು ಪೊಲೀಸರ ವಶಕ್ಕೆ ಪಡೆದಿದ್ದು, ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News