ಎರಡನೇ ದಿನ ಸುಸೂತ್ರವಾಗಿ ನಡೆದ ಪಿಯು ಪರೀಕ್ಷೆ: 249 ಮಂದಿ ಗೈರು
Update: 2020-03-05 21:55 IST
ಬೆಂಗಳೂರು, ಮಾ.5: ಎರಡನೇ ದಿನ ನಡೆದ ದ್ವಿತೀಯ ಪಿಯುಸಿಯ ವಿವಿಧ ಪ್ರಾದೇಶಿಕ ಭಾಷೆಗಳ ಪರೀಕ್ಷೆಗೆ 249 ಮಂದಿ ಗೈರಾಗಿದ್ದು, ಯಾವುದೇ ಗೊಂದಲಗಳಿಲ್ಲದೇ ನಡೆಯಿತು.
ತಮಿಳು ಭಾಷೆ ಪರೀಕ್ಷೆ ಬರೆಯಲು 313 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, 14 ಮಂದಿ ಗೈರಾಗಿದ್ದರು. ತೆಲುಗು ಪರೀಕ್ಷೆಗೆ 152 ಜನ ನೋಂದಾಯಿಸಿಕೊಂಡಿದ್ದು, 7 ಜನ ಗೈರಾಗಿದ್ದರು. ಮಲಯಾಳಂಗೆ 52 ಜನ ನೋಂದಾಯಿಸಿಕೊಂಡಿದ್ದು, ಒಬ್ಬರು ಗೈರಾಗಿದ್ದರು.
ಮರಾಠಿ ಭಾಷೆಗೆ 2369 ಜನ ನೋಂದಾಯಿಸಿಕೊಂಡಿದ್ದು, 176 ಜನ ಗೈರಾಗಿದ್ದರು. ಫ್ರೆಂಚ್ ಭಾಷೆಗೆ 2768 ಜನ ನೋಂದಾಯಿಸಿಕೊಂಡಿದ್ದು, 24 ಜನರು ಗೈರಾಗಿದ್ದರೆ, ಅರೇಬಿಕ್‌ಗೆ 408 ಜನ ನೋಂದಾಯಿಸಿಕೊಂಡಿದ್ದು, 17 ಜನರು ಗೈರಾಗಿದ್ದರು.