ಸುಬ್ಬು ಹೊಲೆಯಾರ್, ನುಗಡೋಣಿ, ಉಷಾ ಪಿ.ರೈ ಸೇರಿ 15 ಮಂದಿಗೆ ಅಕಾಡೆಮಿ ಪ್ರಶಸ್ತಿ

Update: 2020-03-06 14:32 GMT
ಸುಬ್ಬು ಹೊಲೆಯಾರ್, ಅಮರೇಶ ನುಗಡೋಣಿ, ಉಷಾ ಪಿ.ರೈ 

ಬೆಂಗಳೂರು, ಮಾ.6: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2019ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, 5 ಮಂದಿ ಸಾಧಕರಿಗೆ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು 10 ಮಂದಿಗೆ ಸಾಹಿತ್ಯಶ್ರೀ ಪ್ರಶಸ್ತಿ, 19 ಲೇಖಕರಿಗೆ ಪುಸ್ತಕ ಬಹುಮಾನ ಹಾಗೂ 9 ದತ್ತಿನಿಧಿ ಬಹುಮಾನ ಪ್ರಕಟಿಸಲಾಗಿದೆ.

ಗೌರವ ಪ್ರಶಸ್ತಿಗೆ ಪ್ರೊ.ಕೆ.ಜಿ.ನಾಗರಾಜಪ್ಪ(ತುಮಕೂರು), ಬಾಬು ಕೃಷ್ಣಮೂರ್ತಿ(ಬೆಂಗಳೂರು), ಉಷಾ ಪಿ. ರೈ(ಉಡುಪಿ), ಪ್ರೊ.ಲಕ್ಷ್ಮಣ ತೆಲಗಾವಿ (ಚಿತ್ರದುರ್ಗ) ಹಾಗೂ ಡಾ.ವೀರಣ್ಣ ರಾಜೂರ(ಕೊಪ್ಪಳ)ರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಸಾಹಿತ್ಯ ಅಕಾಡೆಮಿಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸಾಹಿತ್ಯಶ್ರೀ ಪ್ರಶಸ್ತಿಗೆ ನಾಲ್ಕು ಪ್ರಕಾರಗಳಲ್ಲಿ ಆಯ್ಕೆ ಮಾಡಲಾಗಿದ್ದು, ಸೃಜನಶೀಲ, ಸೃಜನೇತರ, ಸಾಹಿತ್ಯ ಪರಿಚಾರಕ ಹಾಗೂ ಹೊರನಾಡಿನ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಸೃಜಶೀಲ ಸಾಹಿತ್ಯ: ಅಮರೇಶ ನುಗಡೋಣಿ(ರಾಯಚೂರು), ಸುಬ್ಬು ಹೊಲೆಯಾರ್(ಸಕಲೇಶಪುರ), ಎಂ.ಎಸ್.ವೇದಾ(ಮೈಸೂರು), ವಸುಧೇಂದ್ರ(ಬಳ್ಳಾರಿ), ಡಾ.ಜಿ.ಪ್ರಶಾಂತ ನಾಯಕ(ಚಾಮರಾಜನಗರ)ರನ್ನು ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಡಾ.ವಿ.ಎಸ್.ಮಾಳಿ(ಬೆಳಗಾವಿ), ಪ್ರೊ.ಎಫ್.ಟಿ.ಹಳ್ಳೀಕೇರಿ(ಬಳ್ಳಾರಿ), ಡಾ.ಮಾಧವ ಪೆರಾಜೆ(ಕೊಡಗು) ಸೃಜನೇತರ ಸಾಹಿತ್ಯ ಕ್ಷೇತ್ರದ ಸಾಧಕರಾಗಿದ್ದಾರೆ. ಪಿ.ಶಿವಣ್ಣ(ಶಿವಮೊಗ್ಗ)ರನ್ನು ಸಾಹಿತ್ಯ ಪರಿಚಾರಕ ಹಾಗೂ ಡಾ.ಶಾರದ ಕುಪ್ಪಂ(ಬಳ್ಳಾರಿ)ರನ್ನು ಹೊರನಾಡಿನ ಸಾಧಕರೆಂದು ಗುರುತಿಸಿ ಸಾಹಿತ್ಯಶ್ರೀ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು. 2019ನೇ ಸಾಲಿನ ಗೌರವ ಪ್ರಶಸ್ತಿ 50 ಸಾವಿರ ರೂ., ಸಾಹಿತ್ಯಶ್ರೀ ಪ್ರಶಸ್ತಿ 25 ಸಾವಿರ ರೂ. ನಗದು ಒಳಗೊಂಡಿದೆ ಎಂದು ಅವರು ತಿಳಿಸಿದರು.

2018ನೇ ಸಾಲಿನ ಪುಸ್ತಕ ಬಹುಮಾನಕ್ಕೆ 19 ಕೃತಿಗಳು ಆಯ್ಕೆ

-ಎಚ್.ಎನ್.ಆರತಿ (ಸ್ಮೋಕಿಂಗ್ ಝೋನ್, ಕಾವ್ಯ)

-ವಿಲ್ಸನ್ ಕಟೀಲ್ (ನಿಷೇಧಕ್ಕೊಳಪಟ್ಟ ಒಂದು ನೋಟು, ಯುವಕವಿಯ ಪ್ರಥಮ ಸಂಕಲನ)

-ಕಾ.ತ.ಚಿಕ್ಕಣ್ಣ (ಮಳೆಬಯಲು, ಕಾದಂಬರಿ)

-ಎಸ್.ಗಂಗಾಧರಯ್ಯ (ದೇವರ ಕುದುರೆ, ಸಣ್ಣಕತೆ)

-ಹೂಲಿ ಶೇಖರ (ಸುಳಿವಾತ್ಮ ಎನ್ನೊಳಗೆ, ನಾಟಕ)

-ಜಿ.ಕೆ.ರವೀಂದ್ರಕುಮಾರ್ (ತಾರಸಿ ಮಲ್ಹಾರ್, ಲಲಿತ ಪ್ರಬಂಧ)

-ಪ್ರಸಾದ್ ನಾಯ್ಕ (ಹಾಯ್ ಅಂಗೋಲಾ, ಪ್ರವಾಸ ಸಾಹಿತ್ಯ)

-ಮ.ಸು.ಮನ್ನಾರ್ ಕೃಷ್ಣರಾವ್ (ಸರ್ಧಾರ್ ವಲ್ಲಭಭಾಯ್ ಪಟೇಲ್, ಜೀವನ ಚರಿತ್ರೆ)

-ಎಸ್.ಆರ್.ವಿಜಯಶಂಕರ (ವಸುಧಾ ವಲಯ, ಸಾಹಿತ್ಯ ವಿಮರ್ಶೆ)

-ಪ್ರೊ.ಶಿವರಾಮಯ್ಯ (ಪಂಪಭಾರತ, ಗ್ರಂಥ ಸಂಪಾದನೆ)

-ಬಸು ಬೇವಿನಗಿಡದ (ಓಡಿ ಹೋದ ಹುಡುಗ, ಮಕ್ಕಳ ಸಾಹಿತ್ಯ)

-ಸುಧೀಂದ್ರ ಹಲ್ದೋಡ್ಡೇರಿ (ಸದ್ದು ಸಂಶೋಧನೆ ನಡೆಯುತ್ತಿದೆ, ವಿಜ್ಞಾನ ಸಾಹಿತ್ಯ)

-ರವಿ ಹಂಜ್ (ಹುಯೆನ್ ತ್ಸಾಂಗನ ಮಹಾ ಪಯಣ, ಮಾನವಿಕ)

-ಡಾ.ಪಂಡಿತ ಕೆ.ರಾಠೋಡ್ (ಕರ್ನಾಟಕದಲ್ಲಿ ಧಾರ್ಮಿಕ ಸಂಘರ್ಷ, ಸಂಶೋಧನೆ)

-ಎಂ.ಮಾಧವ ಪೈ (ಸಾವಿತ್ರಿ, ಅನುವಾದ-1)

-ಡಿ.ಎನ್.ಶ್ರೀನಾಥ್ (ಕನ್ನಡ ಕಿ ಚರ್ಚಿತ್ ಬೀಸ್ ಕಹಾನಿಯಾ, ಅನುವಾದ-2)

-ನರೇಂದ್ರ ರೈ ದೇರ್ಲ (ನೆಲಮುಖಿ, ಅಂಕಣ ಬರಹ)

-ಪುಂಡಲೀಕ ಕಲ್ಲಿಗನೂರು (ಶಿಲ್ಪಕಲಾ ದೇಗುಲಗಳು, ಸಂಕೀರ್ಣ)

-ಪ್ರೊ.ಕೆ.ಸುಮಿತ್ರಾಬಾಯಿ (ಸೂಲಾಡಿ ಬಂದೋ ತಿರುತಿರುಗೀ, ಲೇಖಕರ ಮೊದಲ ಕೃತಿ)

ದತ್ತಿ ಬಹುಮಾನ ಪಡೆದವರು

-ಸ್ಮಿತಾ ಮಾಕಳ್ಳಿ (ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ, ಕಾವ್ಯ)

-ಡಾ.ಲೋಕೇಶ ಅಗಸನಕಟ್ಟೆ (ಚದುರಂಗ ದತ್ತಿನಿಧಿ, ಕಾದಂಬರಿ)

-ಚಿದಾನಂದ ಸಾಲಿ (ಇಂದಿರಾ ದತ್ತಿ, ಲಲಿತಾ ಪ್ರಬಂಧ)

-ಚಂಸು ಪಾಟೀಲ (ಸಿಂಪಿ ಲಿಂಗಣ್ಣ ದತ್ತಿ, ಜೀವನಚರಿತ್ರೆ)

-ಸುರೇಶ್ ನಾಗಲಮಡಿಕೆ (ಪಿ.ಶ್ರೀನಿವಾಸರಾವ ದತ್ತಿನಿಧಿ, ಸಾಹಿತ್ಯ ವಿಮರ್ಶೆ)

-ಜಿ.ರಾಮನಾಥ ಭಟ್ (ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿ, ಅನುವಾದ-1)

-ಡಾ.ಲಕ್ಷ್ಮಣ್ ವಿ.ಎ (ಮಧುರಚೆನ್ನ ದತ್ತಿ, ಲೇಖಕರ ಮೊದಲ ಸ್ವತಂತ್ರ ಕೃತಿ)

-ಎನ್.ತಿರುಮಲೇಶ್ವರ ಭಟ್ (ಅಮೆರಿಕ ಕನ್ನಡ ದತ್ತಿನಿಧಿ, ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ)

-ಲಕ್ಷ್ಮೀಶ ತೋಳ್ಪಾಡಿ (ಬಿ.ವಿ.ವೀರಭದ್ರಪ್ಪ ದತ್ತಿನಿಧಿ, ವೈಚಾರಿಕ ಬರಹ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News