ಉದ್ಯೋಗ ಕೊಡಿಸುವ ನೆಪದಲ್ಲಿ 46 ಸಾವಿರ ರೂ. ವಂಚನೆ

Update: 2020-03-06 16:13 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಮಾ.6: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ 46,190 ರೂ. ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ ವಿನೋಬನಗರ ನಿವಾಸಿಯೊಬ್ಬರು ಮೋಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕ್ವಿಕ್ಕರ್ ಆಪ್ ನಲ್ಲಿ ಈಜಿ ವೇ ಸೆಲ್ಯೂಷನ್ ಕಂಪನಿಯ ಹೆಸರಿನಲ್ಲಿ ಸುಳ್ಳು ಜಾಹೀರಾತು ನೀಡಿ ವ್ಯಕ್ತಿಯಿಂದ ಹಣ ಪಡೆದು ಮೋಸ ಮಾಡಲಾಗಿದೆ ಎನ್ನಲಾಗಿದೆ.

ಕೆಲಸ ಸಿಗುತ್ತದೆ ಎಂಬ ನಂಬಿಕೆಯಿಂದ ಗೂಗಲ್ ಪೇ ಮೂಲಕ ವ್ಯಕ್ತಿ ಹಣ ಹಾಕಿದ್ದಾನೆ. ಆದರೆ ಇದೀಗ ಹಣವೂ ಇಲ್ಲದೆ ಕೆಲಸವೂ ಇಲ್ಲದೆ ಕಂಗಾಲಾಗಿದ್ದಾನೆ. ಹಣ ಪಡೆದುಕೊಂಡ ವ್ಯಕ್ತಿ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದ್ದು, ವ್ಯಕ್ತಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News