ಮಹಿಳೆಯೊಂದಿಗೆ ಕಿರಿಯ ಮಗ ಪರಾರಿ: ಅವಮಾನದಿಂದ ತಾಯಿ- ಮಗ ಆತ್ಮಹತ್ಯೆ
Update: 2020-03-08 22:25 IST
ಗುಂಡ್ಲುಪೇಟೆ: ಮಹಿಳೆಯೊಂದಿಗೆ ಕಿರಿಯ ಮಗ ಪರಾರಿಯಾದ ಬಗ್ಗೆ ಅವಮಾನ ಉಂಟಾಗಿ ತಾಯಿ ಹಾಗೂ ಹಿರಿಯ ಮಗ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಬೆಳಚವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇವಮ್ಮ (40) ಸಿದ್ದರಾಜು (23) ನೇಣಿಗೆ ಶರಣಾದವರು. ಕಿರಿಯ ಮಗ ನಂಜುಂಡಿ ಎಂಬಾತ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಮೂರು ದಿನಗಳ ಹಿಂದೆ ಓಡಿ ಹೋಗಿದ್ದ. ಇದರಿಂದ ವಿವಾಹಿತೆ ಮಹಿಳೆಯ ಸಂಬಂಧಿಕರು ಮಹದೇವಮ್ಮ ಅವರು ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ತಾಯಿ ಮಗ ಅವಮಾನ ತಾಳಲಾರದೆ ಬೇಸರಗೊಂಡು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬೇಗೂರು ಠಾಣೆಯ ಪಿಎಸ್ಐ ಲೋಕೇಶ ಭೇಟಿ ನೀಡಿದ್ದು, ಶವಗಳನ್ನು ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಲಾಯಿತು.
ಘಟನೆ ಬಗ್ಗೆ ಬೇಗೂರು ಪೊಲೀಸ್ ಠಾಣೆಯಲ್ಲಿ ಮೃತ ಮಹದೇವಮ್ಮ ಸಹೋದರ ಕೃಷ್ಣ ಮೂರ್ತಿ ಗ್ರಾಮದ ನಾಲ್ವರ ಮೇಲೆ ದೂರು ನೀಡಿದ್ದಾರೆ.