ಸಾಲಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ

Update: 2020-03-08 17:02 GMT

ಸುರಪುರ: ಸಾಲ ಬಾಧೆಗೆ ಬೇಸತ್ತು ರೈತರೊರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕುಂಬಾರಪೇಟೆಯಲ್ಲಿ ನಡೆದಿದೆ.

ಕುಂಬಾರಪೇಟೆಯ ರೈತ ತಿರುಮಣ್ಣ ಯಲ್ಲಪ್ಪ ಕವಲಿ (53) ಮೃತ ರೈತ. ಇವರಿಗೆ 1 ಎಕರೆ ಜಮೀನು ಹಾಗು ಮೂರು ಎಕರೆ ಪಿತ್ರಾರ್ಜಿತ ಜಮೀನಿದ್ದು, ಈ ಮೂರು ಎಕರೆಯಲ್ಲಿ ಮೃತನ ಮೂರು ಜನ ಸಹೋದರರು ಪಾಲುದಾರರಾಗಿದ್ದಾರೆ.

ಇನ್ನುಳಿದಂತೆ 3 ಎಕರೆ ಬೇರೆಯವರ ಜಮೀನು ಲೀಝ್ ಗೆ ಪಡೆದು ವ್ಯವಸಾಯ ಮಾಡಿಕೊಂಡಿದ್ದು, ಆದರೆ ಸತತ ಬರಗಾಲದಿಂದ ನೊಂದ ತಿರುಮಣ್ಣ ಅವರು ಖಾಸಗಿಯವರ ಬಳಿ ಸುಮಾರು 4 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದನ್ನು ತೀರಿಸಲಾಗದೆ ಬೇಸತ್ತ ತಿರುಮಣ್ಣ ಶನಿವಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಸುರಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಕರಣವನ್ನು ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ನಾವೆಲ್ಲ ರೈತರು ಸಾಲದಿಂದ ನಿತ್ಯವು ನರಳುತ್ತಿದ್ದೇವೆ. ಇಂದು ತಿರುಮಣ್ಣ ನಾಳೆ ಇನ್ಯಾರೊ ಅನ್ನೊ ಸ್ಥಿತಿಯಲ್ಲಿದ್ದೇವೆ. ಆದರೆ ಸರಕಾರಗಳು ಮಾತ್ರ ಮೊಸಳೆ ಕಣ್ಣಿರು ಹಾಕುವ ನಾಟಕ ಮಾಡುತ್ತಿವೆ. ಸರಕಾರ ತಿರುಮಣ್ಣನ ಕುಟುಂಬಕ್ಕೆ ಕನಿಷ್ಠ 20 ಲಕ್ಷ ರೂ. ಪರಿಹಾರ ನೀಡಬೇಕು ಹಾಗು ರಾಜ್ಯದ ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News