ಮತ್ತೆ ಕುಸಿದ ಷೇರು ಪೇಟೆ: 2010ರ ನಂತರ ಒಂದೇ ದಿನದ ಗರಿಷ್ಠ ಕುಸಿತ

Update: 2020-03-09 09:06 GMT

ಮುಂಬೈ: ಕೊರೊನಾವೈರಸ್ ಹಾವಳಿಯಿಂದ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತದ ಆತಂಕದ ಕಾರ್ಮೋಡ ಕವಿದಿರುವಂತೆಯೇ ಇಂದು ಷೇರುಪೇಟೆಯಲ್ಲಿ ಭಾರೀ ಕುಸಿತವುಂಟಾಗಿದೆ. ಸೂಚ್ಯಂಕಗಳು ಶೇ 6ಕ್ಕಿಂತಲೂ ಹೆಚ್ಚು ಕುಸಿತ ಕಂಡು ಕನಿಷ್ಠ 10 ವರ್ಷಗಳ ಅವಧಿಯಲ್ಲಿ ಒಂದೇ ದಿನದ ಗರಿಷ್ಠ ಕುಸಿತ ದಾಖಲಾಗಿದೆ. ಬಿಎಸ್‍ಇ ಸೆನ್ಸೆಕ್ಸ್ ಸೂಚ್ಯಂಕ  2,366.26ರಷ್ಟು ಕುಸಿತ ಕಂಡು 35,210.36ಗೆ ತಲುಪಿದರೆ ನಿಫ್ಟಿ ಸೂಚ್ಯಂಕವು  ಹಿಂದಿನ ದಿನಕ್ಕೆ ಹೋಲಿಸಿದಾಗ 662.4 ಅಂಕಗಳಷ್ಟು ಕುಸಿತ ಕಂಡು 10,327.05 ಅಂಕಗಳಿಗೆ ತಲುಪಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಶೇರು ಬೆಲೆ ಶೇಕಡಾ 11ರಷ್ಟು ಕುಸಿತ ಕಂಡಿದ್ದು ಕಳೆದ ಹತ್ತು ವರ್ಷಗಳಲ್ಲಿಯೇ ಒಂದೇ ದಿನದಲ್ಲಿ ಕಂಪೆನಿಯ ಶೇರು ಇಷ್ಟರ ಮಟ್ಟಿನ ಕುಸಿತ ಕಂಡಿರಲಿಲ್ಲ.

ರಿಲಯನ್ಸ್ ಹೊರತಾಗಿ ಎಚ್‍ಡಿಎಫ್‍ಸಿ, ಐಸಿಐಸಿಐ ಬ್ಯಾಂಕ್, ಎಚ್‍ಡಿಎಫ್‍ಸಿ ಇವುಗಳ ಷೇರು ಬೆಲೆಗಳೂ ಕುಸಿತ ಕಂಡು ಸೂಚ್ಯಂಕ ಒಟ್ಟು 1,100 ಅಂಕಗಳ ಕುಸಿತಕ್ಕೆ ಕಾರಣವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News