ಕೊಳ್ಳೇಗಾಲ: ಜೂಜಾಡುತ್ತಿದ್ದ 14 ಮಂದಿಯ ಬಂಧನ, ನಗದು ಜಪ್ತಿ

Update: 2020-03-09 12:54 GMT

ಕೊಳ್ಳೇಗಾಲ, ಮಾ.9: ಜೂಜಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ 14 ಮಂದಿಯನ್ನು ಬಂಧಿಸಿ, ಪಣಕ್ಕಿಟ್ಟಿದ್ದ 91,460 ರೂ.ಗಳನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಕುಣಗಳ್ಳಿ ಗ್ರಾಮದ ಗೋವಿಂದರಾಜು(40) ಸಿಲ್ಕಲ್‍ಪುರ ರಾಜೇಶ(30) ಸಿಂಗನಲ್ಲೂರು ನಂಜುಂಡಸ್ವಾಮಿ(43) ಗುಂಡೇಗಾಲ ಪ್ರಭುಸ್ವಾಮಿ(39) ಉಗನಿಯಾ ಬಸವರಾಜು(42) ಕಾಮಗೆರೆ ರಾಜು(38), ಪಟ್ಟಣದ ಮಧು(43) ಮಹಮ್ಮದ್ ಪಾಷ (32), ಬಸವರಾಜು(46), ರಾಮು(45) ಪ್ರಸಾದ್(30) ಬಸ್ತೀಪುರ ನಾಗರಾಜು(39) ಮೋಳೆ ಮಹದೇವಸ್ವಾಮಿ (45) ಹಾಗೂ ಬೆಂಗಳೂರಿನ ಮಂಜುನಾಥ(30) ಬಂಧಿತ ಆರೋಪಿಗಳು.

ಮಧುವನಹಳ್ಳಿ ಗ್ರಾಮದ ಹೊರವಲಯದ ಚಾನಲ್ ರಸ್ತೆಯಲ್ಲಿ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟುಕೊಂಡು ಜೂಜಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ಶ್ರೀಕಾಂತ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಅಶೋಕ್ ತಮ್ಮ ಸಿಬ್ಬಂದಿಗಳ ಜೊತೆ ದಾಳಿ ನಡೆಸಿ ಇಸ್ಪೀಟ್ ಆಡುತ್ತಿದ್ದ 14 ಮಂದಿಯನ್ನು ಬಂಧಿಸಿ, ಪಣಕ್ಕಿಟ್ಟಿದ್ದ 91,460 ರೂ. ಹಣವನ್ನು ವಶಪಡಿಸಿಕೊಂಡರು.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲಾ ಆರೋಪಿಗಳನ್ನು ಠಾಣಾ ಜಾಮೀನಿನಲ್ಲಿ ನೊಟೀಸ್ ಜಾರಿಗೊಳಿಸಿ ಬಿಡುಗಡೆ ಮಾಡಲಾಯಿತು.

ದಾಳಿ ವೇಳೆ ಮುಖ್ಯಪೇದೆಗಳಾದ ನಟರಾಜು, ನಾಗರಾಜು, ಮಂಜುನಾಥ್, ಲಿಂಗರಾಜು, ನಿಂಗರಾಜು, ನಾಗಶೆಟ್ಟಿ, ಪೇದೆಗಳಾದ ರಘು, ವೀರೇಂದ್ರ, ಜಯರಾಮು, ಶಕ್ರುನಾಯ್ಕ, ಮಾಯಪ್ಪ, ಬಸವರಾಜು, ಮಹೇಂದ್ರ ಹಾಗೂ ದ್ವಾರಕೀಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News