ಅಣ್ಣಾಮಲೈ ಬಳಿಕ ರಾಜ್ಯದ ಮತ್ತೋರ್ವ ಐಪಿಎಸ್ ಅಧಿಕಾರಿ ಸ್ವಯಂ ನಿವೃತ್ತಿ

Update: 2020-03-11 12:11 GMT

ಬೆಂಗಳೂರು, ಮಾ.11: ಇತ್ತೀಚಿಗೆ ಪೊಲೀಸ್ ಅಧಿಕಾರಿ ಅಣ್ಣಾಮಲೈ ಸ್ವಯಂ ನಿವೃತ್ತಿ ಘೋಷಿಸಿ, ಪೊಲೀಸ್ ಇಲಾಖೆಯಿಂದ ದೂರ ಸರಿದ ಬೆನ್ನಲ್ಲೇ ರಾಜ್ಯದ ಮತ್ತೋರ್ವ ಐಪಿಎಸ್ ಅಧಿಕಾರಿ ಸಂಜಯ್ ಸಹಾಯ್ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ.

ಕರ್ನಾಟಕ ರಾಜ್ಯ ಗಣಕ ಪರಿಷತ್ ಎಡಿಜಿಪಿ ಆಗಿರುವ ಸಂಜಯ್ ಸಹಾಯ್ ಸ್ವಯಂ ನಿವೃತ್ತಿ ಪಡೆಯಲು ಮುಂದಾಗಿದ್ದಾರೆ. ಇದಕ್ಕೆ ರಾಜ್ಯ ಸರಕಾರ ಅನುಮತಿ ಕೂಡ ನೀಡಿದೆ ಎಂದು ವರದಿಯಾಗಿದೆ. ಮಾ. 31ರವರೆಗೆ ಸಂಜಯ್ ಸಹಾಯ್ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟನೆಯೊಂದು ತಿಳಿಸಿದೆ. 

ಸಂಜಯ್ ಸಹಾಯ್ 1989ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದು, ಇವರ ಸ್ವಯಂ ನಿವೃತ್ತಿಯ ನಿರ್ಧಾರಕ್ಕೆ ಕಲಂ 16(2) ಡಿಸಿಆರ್‌ಬಿ ನಿಯಮದಂತೆ ರಾಜ್ಯ ಸರಕಾರ ಅನುಮತಿ ನೀಡಿ, ಆದೇಶ ಹೊರಡಿಸಿದೆ. ಆದರೆ, ಅಧಿಕಾರಿಯ ಈ ನಿರ್ಧಾರಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News