ಝಹ್ರಾ ಬುಕ್ ಸ್ಟಾಲ್ ಪುತ್ತೂರಿನಲ್ಲಿ ಪುನರಾರಂಭ

Update: 2020-03-11 18:11 GMT

ಪುತ್ತೂರು, ಮಾ.11: ಕೆಎಸ್ಆರ್‌ಟಿಸಿ ಬಸ್ ಸ್ಟ್ಯಾಂಡ್ ಮುಂಭಾಗದಲ್ಲಿರುವ ಎ.ಎಂ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ 20 ವರ್ಷದಿಂದ ಕಾರ್ಯಾಚರಿಸುತ್ತಿರುವ ಝಹ್ರಾ ಬುಕ್ ಸ್ಟಾಲ್ ಹೊಸ ಮ್ಯಾನೇಜ್ಮೆಂಟ್ ಅಧೀನದಲ್ಲಿ ಇತ್ತೀಚಿಗೆ ಪುನರಾರಂಭಗೊಂಡಿತು. 

ಎಲ್ಲಾ ವಿಧ ಉಪಯುಕ್ತ ವಸ್ತುಗಳನ್ನೊಳಗೊಂಡ ಬೃಹತ್ ಪುಸ್ತಕ ಮಳಿಗೆಯನ್ನು ಹಾಫಿಝ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್ ಉದ್ಘಾಟಿಸಿದರು. ಉಮರ್ ಸಖಾಫಿ ತಲಕ್ಕಿ, ಲತೀಫ್ ಸಖಾಫಿ ಕಾವು, ಯೂಸುಫ್ ಮುಸ್ಲಿಯಾರ್ ಬೆಳ್ಳಾರೆ ಹಾಗೂ ಇನ್ನಿತರ ಹಲವು ಉಲಮಾಗಳು ಉಪಸ್ಥಿತರಿದ್ದರು.

'ಬುಕ್ ಸ್ಟಾಲ್ ಕನ್ನಡಿಗರ ಸ್ಪಂದನೆಗಳನ್ನು ಗುರುತಿಸಿ ಉತ್ತಮವಾದ ರೀತಿಯಲ್ಲಿ ಗ್ರಾಹಕ ಸ್ನೇಹಿಯಾಗಿ ಮುಂಬರುವ ದಿನಗಳಲ್ಲಿ ಕಾರ್ಯಾಚರಿಸಲಿದೆಯೆಂದು ಸಂಸ್ಥೆಯ ಮಾಲಕ ಹಾಫಿಝ್ ಅಬ್ದುಲ್ ಹಮೀದ್ ಮನ್ಳರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News