ಶಿವಮೊಗ್ಗ: ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸಿ ಉಪವಾಸ ಧರಣಿ
Update: 2020-03-12 14:07 IST
ಶಿವಮೊಗ್ಗ, ಮಾ.12: ಕೇಂದ್ರ ಸರಕಾರ ಜಾರಿಗೆ ತಂದಿರುವ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾಯ್ದೆ ವಿರೋಧಿಸಿ ಜಾಯಿಂಟ್ ಆಕ್ಷನ್ ಕಮಿಟಿ ಮತ್ತು ಸಂವಿಧಾನ ಉಳಿಸಿ ವೇದಿಕೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ಗುರುವಾರ ಬೆಳಗ್ಗೆ ಆರಂಭಗೊಂಡಿತು.
ಈಗಾಗಲೇ ದೇಶಾದ್ಯಂತ ಹಲವು ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿ ಈ ಸಂವಿಧಾನ ವಿರೋಧಿ ಕಾಯ್ದೆ ಜಾರಿಯಾಗದಂತೆ ರಾಷ್ಟ್ರಪತಿಗೆ ಮನವಿ ಸಲ್ಲಿಸಿವೆ. ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಮಾನವೀಯ ವಿರೋಧಿಯಾದ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಕರಾಳ ಶಾಸನ ಜಾರಿಯಾಗದಂತೆ ತಡೆಯಬೇಕು ಎಂದು ನಿರಶನನಿರತರು ಆಗ್ರಹಿಸಿದರು.