ದಿಲ್ಲಿ ಬಂಧನ: ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಲು ಜಮಾಅತೆ ಇಸ್ಲಾಮಿ ಹಿಂದ್ ನಿರ್ಧಾರ

Update: 2020-03-13 05:40 GMT

ಹೊಸದಿಲ್ಲಿ, ಮಾ.13: ಈಶಾನ್ಯ ದಿಲ್ಲಿಯಲ್ಲಿ ನಡೆದಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಿದವರ ಬಗ್ಗೆ ಅಸ್ಪಷ್ಟತೆ ಇರುವುದರಿಂದ ಜಮಾಅತ್ ಇಸ್ಲಾಮಿ ಹಿಂದ್ ದಿಲ್ಲಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಲು ನಿರ್ಧರಿಸಿದೆ ಎಂದು ಸಮುದಾಯ ವ್ಯವಹಾರಗಳ ಕಾರ್ಯದರ್ಶಿ ಮಲಿಕ್ ಮೊಹ್ತಾಸಿಮ್ ಖಾನ್ ಹೇಳಿದ್ದಾರೆ.

ದಿಲ್ಲಿ ಗಲಭೆಯ ಸಂತ್ರಸ್ತರಿಗೆ ದಿಲ್ಲಿ ಪೊಲೀಸರು ಕಿರುಕುಳ ನೀಡುತ್ತಿರುವುದು ಬಹಳ ಆಘಾತಕಾರಿಯಾಗಿದೆ ಮತ್ತು ಅಪರಾಧಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ದೂರು ದಾಖಲಿಸಬೇಕಾದ ಸಂತ್ರಸ್ತರಲ್ಲಿ ಪ್ರಭಾವಿಗಳು ಭಯದ ವಾತಾವರಣವನ್ನು ಉಂಟು ಮಾಡುತ್ತಿದ್ದಾರೆ ಮತ್ತು ಅವರು ಎಫ್ಐಆರ್ ಸಲ್ಲಿಸಲು ಹಿಂಜರಿಯುತ್ತಿದ್ದಾರೆ. ಒಂದು ಪ್ರಕರಣವನ್ನು ಉದಾಹರಿಸಬೇಕೆಂದರೆ, ಗಲಭೆಯ ಸಮಯದಲ್ಲಿ ಸುಟ್ಟುಹೋದ ಖಾಸಗಿ ಶಾಲೆಯ ಮಾಲಕರದ್ದು. ಅವರ ಬಂಧನವಾಗಿದೆ. ಪರೀಕ್ಷಾ ಅವಧಿಯಾದ ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಈ ಮೂಲಕ ಅನಗತ್ಯ ತೊಂದರೆ ಉಂಟುಮಾಡಲಾಗಿದೆ. ಪೊಲೀಸರು ಶಾಲೆಗೆ ಮೊಹರು ಮಾಡಿದ್ದಾರೆ ಎಂದು ಖಾನ್ ಹೇಳಿದರು.

ಹಿಂಸಾಚಾರದಲ್ಲಿ ಯಾವುದೇ ಪಾತ್ರವನ್ನು ಹೊಂದಿರದ ಅನೇಕ ವ್ಯಕ್ತಿಗಳು ಬಂಧನಕ್ಕೆ ಒಳಗಾಗಿರುವುದರಿಂದ ನಾವು ದಿಲ್ಲಿ ಹೈ ಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಮನವಿಯನ್ನು ಸಲ್ಲಿಸಲಿದ್ದೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News