ತೋಟದಲ್ಲಿ ಕರಡಿ ಪ್ರತ್ಯಕ್ಷ: ಜನರಲ್ಲಿ ಆತಂಕ

Update: 2020-03-13 17:17 GMT

ಶಿವಮೊಗ್ಗ, ಮಾ.13: ನಗರದ ಹೊರವಲಯದಲ್ಲಿರುವ ಆಯನೂರಿನ ತೋಟವೊಂದರಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಉಂಟಾಗಿದೆ.

ಶಿಕಾರಿಪುರದ ಗೋಂದಿ ಚಟ್ನಹಳ್ಳಿ ಹಾಗೂ ಹೊಸ ಜೋಗದ ಭಾಗದಲ್ಲಿ ಗುರುವಾರ ಬೆಳಗ್ಗೆ ಕಾಣಿಸಿಕೊಂಡಿದ್ದ ಈ ಕರಡಿ ನಂತರ ರಾತ್ರಿ ವೇಳೆಗೆ ಆಯನೂರಿನ ಚಕ್ರವರ್ತಿ ನಾಯ್ಕಿ ಎಂಬುವವರ ತೋಟದಲ್ಲಿ ಸಪೋಟ, ಕಲ್ಲಂಗಡಿ ಹಣ್ಣನ್ನು ತಿಂದಿದೆ ಎಂದು ರೈತರು ತಿಳಿಸಿದ್ದಾರೆ.

ರಾತ್ರಿಯ ವೇಳೆ ಕರಡಿಯನ್ನು ಕಂಡ ಜನರ ಭಯಭೀತರಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಕರಡಿಯನ್ನು ಓಡಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಹಾವೇರಿಯಿಂದ ಕರಡಿ ಬಂದಿರಬಹುದು. ಇದು ಅಪರೂಪದ ಕರಡಿಯಾಗಿದೆ. ಇದನ್ನು ‘ಮಲರ್ಸಸ್ ಅರ್ನಿಸಸ್’ ಎಂಬ ಹೆಸರಿನಲ್ಲಿ ಗುರುತಿಸಲಾಗಿದ್ದು, ಈ ಪ್ರಾಣಿ ಅಳಿವಿನಂಚಿನಲ್ಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News