ಕಲಬುರ್ಗಿ: ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಪುತ್ರನನ್ನು ಸಂದರ್ಶನ ಮಾಡಿದ ಪತ್ರಕರ್ತರ ಮೇಲೆ ನಿಗಾ
Update: 2020-03-14 19:01 IST
ಕಲಬುರ್ಗಿ: ಕೋವಿಡ್-19 ವೈರಸ್ ತಗುಲಿ ಸಾವನ್ನಪ್ಪಿದ್ದ ವೃದ್ಧರ ಪುತ್ರನೊಂದಿಗೆ ಸಂದರ್ಶನ ನಡೆಸಿದ್ದ ಇಬ್ಬರು ಪತ್ರಕರ್ತರು ಹಾಗೂ ಓರ್ವ ಕ್ಯಾಮರಾಮನ್ ಮೇಲೆ ನಿಗಾ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹೇಳಿದ್ದಾರೆ.
ಇಬ್ಬರು ವರದಿಗಾರರು ಮತ್ತು ಓರ್ವ ಕ್ಯಾಮೇರಾ ಮ್ಯಾನ್ ಸೇರಿ ಮೂವರು ಪತ್ರಕರ್ತರನ್ನು ಸಂದರ್ಶನ ವೇಳೆ ವೈರಸ್ ತಗಲಿರುವ ಶಂಕೆ ವ್ಯಕ್ತಪಡಿಸಿ ತಪಾಸಣೆಗೆ ಒಳಪಡಿಸಲಾಗಿದೆ.
ಇನ್ನೂ ಹಲವು ಪತ್ರಿಕೆ, ಸುದ್ದಿ ವಾಹಿನಿಗಳ ವರದಿಗಾರರು ಸೇರಿ ಸಾಮಾಜಿಕ ಜಾಲಾತಾಣದ ಯೂಟ್ಯೂಬರ್ ಕೂಡಾ ಸೋಂಕು ಹೊಂದಿದ ಸಂಬಂಧಿಕರನ್ನು ಸಂದರ್ಶನ ಮಾಡಿದ್ದು, ತಪಾಸಣೆಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗುತಿದೆ.
ಸಾರ್ವಜನಿಕರ ಹಿತದೃಷ್ಟಿಯಲ್ಲಿ ಪತ್ರಕರ್ತರು ಮತ್ತು ಅಧಿಕಾರಿಗಳು ಆರೋಗ್ಯ ಇಲಾಖೆ ಸಹಕರಿಸಿ, ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ಜಿಲ್ಲಾಧಿಕಾರಿ ಬಿ. ಶರತ್ ಮನವಿ ಮಾಡಿದ್ದಾರೆ.